Site icon PowerTV

ಈಜಲು ಹೋದ ವ್ಯಕ್ತಿ ನೀರು ಪಾಲು

ತುಮಕೂರು : ಹೆಂಡತಿ ಮಕ್ಕಳೊಂದಿಗೆ ಕೆರೆಯಲ್ಲಿ ಈಜು ಕಲಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುರುವೆಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದೆ.

ತುರುವೇಕೆರೆ ತಾಲ್ಲೂಕಿನ ಎಂ.ಬೇವಿನಹಳ್ಳಿ ನಿವಾಸಿ ಯೋಗಾನಂದ (45) ಈಜು ಕಲಿಯಲು ತೆರಳಿ ಈಜಲು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ದಂಡಿನಶಿವರದ ಸಾರಿಗೆಹಳ್ಳಿ ಕೆರೆಗೆ ಈಜು ಕಲಿಯಲು ಪಟ್ಟಣದವರು ಸೇರಿದಂತೆ ಅಕ್ಕ-ಪಕ್ಕದ ಹಳ್ಳಿಯವರು ತೆರಳಿದ್ದಾರೆ. ಈ ರೀತಿ ತೆರಳುವವರಲ್ಲಿ ಎಲ್ಲಾ ವಯೋಮಾನದವರು ಹಾಗೂ ಹೆಂಗಸರು ಮಕ್ಕಳು ಕಲಿಯಲು ಟ್ಯೂಬ್‌ಗಳ ಸಮೇತ ಮುಂಜಾನೆಯೇ ತೆರಳಿ ಸ್ಥಳೀಯ ಈಜು ಪಟು ದಂಡಿನಶಿವರ ತಿಮ್ಮೇಗೌಡ ಮಾರ್ಗದರ್ಶನದಲ್ಲಿ ಈಜು ಕಲಿಯಲು ಹೋಗುತ್ತಿದ್ದರು.

ಆದರೆ ಎರಡು ದಿನಗಳಿಂದ ದಂಡಿನಶಿವರದ ಈಜು ಪಟು ತಿಮ್ಮೇಗೌಡ ಅನಾರೋಗ್ಯ ನಿಮಿತ್ತ ಹೋಗಿರಲಿಲ್ಲ. ಆದರೂ ಕೂಡ ಯೋಗಾನಂದ ಸಾರಿಗೆಹಳ್ಳಿ ಕೆರೆಗೆ ಇಂದು ಎಂದಿನಂತೆ ಕುಟುಂಬ ಸಮೇತ ಈಜು ಕಲಿಯಲು ಬಂದು ಟ್ಯೂಬ್‌ನೊಂದಿಗೆ‌ ಈಜಲು ಮೇಲಿನಿಂದ ನೀರಿನಲ್ಲಿ ಬಿದ್ದಾಗ ಟ್ಯೂಬ್ ದೇಹದಿಂದ ಹೊರಬಂದಿದೆ. ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ದಂಡಿನಶಿವರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದು ಮೃತ ದೇಹವನ್ನು ಹೊರತೆಗೆದಿದ್ದಾರೆ.

Exit mobile version