Site icon PowerTV

ಡಿಕೆಶಿ- ಸಿದ್ದರಾಮಯ್ಯ ವಿರುದ್ಧ ಲಕ್ಷ್ಮೀನಾರಾಯಣ್ ಗುಟುರು

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ ಉಂಟಾಗಿದ್ದು, ನಾಯಕರ ವಿರುದ್ಧ ಎಂಡಿ ಲಕ್ಷ್ಮೀನಾರಾಯಣ,ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಹೇಳಿದ್ದಾರೆ.

ಪ್ರಕಟಣೆಯನ್ನ ಹೊರಡಿಸಿ ಲಕ್ಷ್ಮೀನಾರಾಯಣ ಅಸಮಾಧಾನ ವ್ಯಕ್ತಪಡಿಸಬೇಕು. ನನ್ನ ಹುಟ್ಟುಹಬಕ್ಕೆ ಬಂದು ನೀವು ಮಾತು ಕೊಟ್ಟಿದ್ದೇನು? ನಾನು ತುರುವೇಕೆರೆ ಕ್ಷೇತ್ರದ ಟಿಕೆಟ್ ಬಯಸಿದ್ದೆ ಆದರೆ ನೀವೇ ನನ್ನನ್ನ‌ ಸಮಾಧಾನ ಪಡಿಸಿದ್ದಿರಿ. ಕಾಂತರಾಜುಗೆ ಟಿಕೆಟ್ ಮಾತು ಕೊಟ್ಟಿದ್ದೇನೆ. ನಿನ್ನನ್ನ ಎಂಎಲ್ ಸಿ ಮಾಡ್ತೇನೆಂದು ಮಾತು ಕೊಟ್ಟಿದ್ರಿ. ಕೊಟ್ಟ ಮಾತನ್ನ ನೀವು ಮರೆತು ಬಿಟ್ರಾ ಸಿದ್ದರಾಮಯ್ಯ? ಮಾತು ತಪ್ಪಿದ ನಿಮ್ಮ ಆತ್ಮಸಾಕ್ಷಿ ಈಗ ಒಪ್ಪುತ್ತಾ? ಹಲವು ವರ್ಷಗಳಿಂದ ಪಕ್ಷ ಕಟ್ಟಿದ್ದೇನೆ. ಹಿಂದುಳಿದ ವರ್ಗವನ್ನ ಸಂಘಟನೆ ಮಾಡಿದ್ದೇನೆ. ನೀವು ನನ್ನನ್ನ ಮರೆತು ಬಿಟ್ರಾ ? ಡಿಕೆಶಿಯವರೇ ನೀವು ಕೊಟ್ಟಿದ್ದ ಮಾತೇನು. ಎಂಎಲ್ ಸಿ ಮಾಡ್ತೇವೆಂದು ನೀವು ಮಾತು ಕೊಟ್ಟಿರಲಿಲ್ವೇ? ನಿಮ್ಮಿಬ್ಬರ ಖುರ್ಚಿ ಕಚ್ಚಾಟದಿಂದ ಕಾರ್ಯಕರ್ತರು ಬಲಿಪಶುವಾಗಿದ್ದಾರೆ. ಇಬ್ಬರು ನಾಯಕರ ವಿರುದ್ಧ ಎಂಡಿಎಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಕೆಶಿ- ಸಿದ್ದರಾಮಯ್ಯ ವಿರುದ್ಧ ಲಕ್ಷ್ಮೀನಾರಾಯಣ್ ಗರಂ ಆಗಿದ್ದಾರೆ.

ಅದಲ್ಲದೇ, ಒನ್ ಟು ಒನ್ ಚರ್ಚೆಗೆ ಹೊರಟ ಸಿದ್ದರಾಮಯ್ಯ. ರಾಹುಲ್ ಗಾಂಧಿಯವರ ಜೊತೆ ಒನ್ ಟು ಒನ್ ಚರ್ಚೆ ರಾಹುಲ್ ಭೇಟಿಗೆ ಹೊರಟ ಸಿದ್ದರಾಮಯ್ಯ. ಮಧ್ಯಾಹ್ನ 12 ಗಂಟೆಗೆ ಇಬ್ಬರು ನಾಯಕರು ಭೇಟಿ ನೀಡಿದ್ದ ಬಳಿಕ 12:45 ರಿಂದ ಡಿ.ಕೆ ಶಿವಕುಮಾರ್ ಜೊತೆ ಮಾತುಕತೆ ರಾಹುಲ್ ಗಾಂಧಿ ನಡೆಸಲಿದ್ದಾರೆ.

Exit mobile version