Site icon PowerTV

ಮಂಡ್ಯದ ಜನರಿಗಾಗಿ ರಾಜಕಾರಣಕ್ಕೆ ಬಂದಿದ್ದೇನೆ: ಸುಮಲತಾ ಅಂಬರೀಶ್

ಮಂಡ್ಯ: ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಹತ್ತಿರ ನನ್ನ ಮಗನಿಗೆ ಟೀಕೆಟ್ ಬೇಕು ಅಂತ ಬೇಡಿಕೆ ಇಟ್ಟಿಲ್ಲ, ಇಡೋದು ಇಲ್ಲ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಪಕ್ಷ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ನಿಜಕ್ಕೂ ಆಶ್ಚರ್ಯವಾಗುತ್ತೆ. ನಗಬೇಕಾ ಅನ್ಸುತ್ತೆ, ಕನಸಲ್ಲಿ ಬಂದು ಈ ರೀತಿ ಮಾತನಾಡ್ತಿದ್ದಾರಾ, ಒಂದು ವಿಷಯ ಸ್ಪಷ್ಟವಾಗಿ ಹೇಳ್ತೇನೆ ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಹತ್ತಿರ ನನ್ನ ಮಗನಿಗೆ ಟೀಕೆಟ್ ಬೇಕು ಅಂತ ಬೇಡಿಕೆ ಇಟ್ಟಿಲ್ಲ, ಇಡೋದು ಇಲ್ಲ. ರಾಜಕೀಯದಲ್ಲಿ ಅಭಿಷೇಕ್ ಇಂಟ್ರೆಸ್ಟ್ ಇದ್ರೆ ಆ ಪಕ್ಷ ಬೇಕು ಅಂತ ಅದು ನನಗೆ ಗೊತ್ತಿಲ್ಲ. ಇದುವರೆಗೆ ನಾನು ಈ ವಿಚಾರ ಪ್ರಸ್ತಾಪ ಮಾಡಿಲ್ಲ ಎಂದರು.

ಇನ್ನು ಅಭಿಷೇಕ್​​​ಗೆ ಟಿಕೆಟ್ ಬೇಕು ಅಂತ ಕೇಳುವಷ್ಟು ಅಗತ್ಯ ನನಗೆ ಇಲ್ಲ. ಅಭಿಷೇಕ್ ಚುನಾವಣೆಗೆ ನಿಂತಿಕೊಳ್ಳಬೇಕು ಅನ್ಸುದ್ರೆ, ಯಾವ ಯಾವ ಪಕ್ಷದಿಂದ ಆಫರ್ ಬಂದಿದೆ ನಾನು ಹೇಳುವುದಕ್ಕೆ ಇಷ್ಟ ಪಡಲ್ಲ.ಅದನ್ನು ಅವನೇ ನಿರ್ಧಾರ ಮಾಡಬೇಕು. ಅಲ್ಲದೇ ಅವನಿಗೆ ರಾಜಕೀಯ ಸ್ಟೂಲ್ ಹಾಕುವ ಕೆಲಸ ಮಾಡಲ್ಲ. ಆದರೆ, ಆಫರ್ ಇರುವುದಂತು ನಿಜ ಎಂದು ಮಾಹಿತಿ ತಿಳಿಸಿದರು.

ಅಲ್ಲದೇ ನಾನು ಅಧಿಕೃತವಾಗಿ ಯಾವ ಪಕ್ಷವನ್ನ ಸೇರಿಲ್ಲ. ನಾನು ಸ್ವತಂತ್ರವಾಗಿದ್ದೇನೆ, ನಾನು ಕೆಲಸ ಮಾಡ್ತಿದ್ದೇನೆ. 2019 ರಲ್ಲಿ ನಾನು ಚುನಾವಣೆಗೆ ನಿಲ್ಲೆಬೇಕಾದ್ರೆ ಕಾಂಗ್ರೆಸ್ ಪಕ್ಷ ಅಪ್ರೋಚ್ ಮಾಡಿ ಸೀಟ್ ಕೇಳಬೇಕಾದ್ರೆ ಮಂಡ್ಯ ಕೊಡಕ್ಕಾಗಲ್ಲ ಅಂದರು, ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕೋಸ್ಕರ. ರಾಜಕೀಯ ಅನಿವಾರ್ಯ ಅಲ್ಲ. ಮಂಡ್ಯ ಜನರ ವಿಶ್ವಾಸಕ್ಕೆ ,ಋಣ ತೀರಿಸಲು ಬಂದಿದ್ದೇನೆ. ಮಂಡ್ಯಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇನೆ. ನನಗೆ ಅಧಿಕಾರದ ದುರಾಸೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಮಂಡ್ಯದ ಜನರಿಗಾಗಿ ರಾಜಕಾರಣಕ್ಕೆ ಬಂದಿದ್ದೇನೆ :  ಸುಮಲತಾ ಅಂಬರೀಶ್

ಯಾವ ಪಕ್ಷದ ಹತ್ರಾನೂ ಅಭಿಷೇಕ್​​ಗೆ ಟೀಕೆಟ್ ಬೇಕೆಂದು ಬೇಡಿಕೆ ಇಟ್ಟಿಲ್ಲ :

Exit mobile version