Site icon PowerTV

ಅನೈತಿಕ ಸಂಬಂಧ ಶಂಕೆ: ಪತ್ನಿಯ ರುಂಡಮುಂಡ ಬೇರೆ ಮಾಡಿದ ಪತಿ

ಮೈಸೂರು :  ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯ ರುಂಡಮುಂಡ ಬೇರೆಯಾಗುವಂತೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪುಟ್ಟಮ್ಮ(40) ಮೃತ ದುರ್ದೈವಿ. ಪತಿ ದೇವರಾಜ್ ಬಂಧನಕ್ಕೆ ವರುಣಾ ಪೊಲೀಸರು ಜಾಲ ಬೀಸಿದ್ದಾರೆ. ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ ಆರೋಪಿ, ನಂತರ ಎರಡನೇ ಮದುವೆಯಾಗಿ ಈಗ ಆಕೆಯನ್ನು ಕೂಡ ಕೊಲೆ ಮಾಡಿದ್ದಾನೆ.

ಮೊದಲ ಹೆಂಡತಿಯಿಂದ ದೂರವಾದ ದೇವರಾಜ್, 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ಎರಡನೇ ವಿವಾಹವಾಗಿದ್ದ. ಎರಡನೇ ಮದುವೆಯಾದರೂ ಪುಟ್ಟಮ್ಮಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. 20 ವರ್ಷದ ಮಗಳಿದ್ದರೂ ಪತ್ನಿ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ ಇದರಿಂದ ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಕಿರುಕುಳ ಹೆಚ್ಚಾಗಿತ್ತು.

ಮಗಳು ಪವಿತ್ರ ಕಾಲೇಜಿಗೆ ಹೋಗಿದ್ದ ವೇಳೆ ಇದೇ ವಿಚಾರಕ್ಕೆ ಕ್ಯಾತೆ ತೆಗೆದ ದೇವರಾಜ್ ಪತ್ನಿಯನ್ನು ಭೀಕರವಾಗಿ ಕೊಂದಿದ್ದಾನೆ. ರುಂಡಮುಂಡವನ್ನು ಬೇರ್ಪಡಿಸಿ ಆಕ್ರೋಶ ತೀರಿಸಿಕೊಂಡಿದ್ದಾನೆ. ಇದೀಗ ದೇವರಾಜ್ ವಿರುದ್ಧ ಮಗಳು ಪವಿತ್ರ ದೂರು ನೀಡಿದ್ದಾಳೆ. ವರುಣಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ದೇವರಾಜ್ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Exit mobile version