Site icon PowerTV

ಕುಟುಂಬ ಕಲಹ: ಮಕ್ಕಳ ಜೊತೆ ತಾಯಿ ನೇಣಿಗೆ ಶರಣು

ಮೈಸೂರು: ಕುಟುಂಬ ಕಲಹದ ಹಿನ್ನೆಲೆ ಮಕ್ಕಳ ಜೊತೆ ಮಹಿಳೆಯು ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ.

ಸರೋಜ (32) ವರ್ಷ ಆತ್ಮಹತ್ಯೆ ಗೆ ಶರಣಾಗಿರುವ ಗೃಹಿಣಿ. ಗೀತಾ(6), ಕುಸುಮ (4) ಮೃತ ಮಕ್ಕಳು. ಕುಟುಂಬ ಕಲಹದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸರೋಜ ನರಸೀಪುರ ತಾಲೂಕಿನ ಮಾವಿನಹಳ್ಳಿ ಗ್ರಾಮದ ನಿಂಗರಾಜು ಜೊತೆ ವಿವಾಹವಾಗಿದ್ದರು. ಆದರೆ ಗಂಡ ನಿಂಗರಾಜುಗೆ ಅಕ್ರಮ ಸಂಬಂಧ ಇರುವ ವಿಷಯಕ್ಕೆ ಪದೇ ಪದೇ ಗಲಾಟೆ ಆಗುತ್ತಿತ್ತು. ಕೆಲ ದಿನಗಳ ಹಿಂದೆ ಸರೋಜ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರ ಆಗಮಿಸಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

ಮೃತ ದೇಹಗಳು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧಿಸಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version