Site icon PowerTV

ಡೀಸೆಲ್​​ಗಾಗಿ ಬಿಎಂಟಿಸಿ ಪರದಾಟ: ಪ್ರಯಾಣಿಕರಿಗೆ ತಟ್ಟುತ್ತಾ ಡೀಸೆಲ್ ಬಿಸಿ..?

ಬೆಂಗಳೂರು: ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿಗೆ, ಇದೀಗ ಡೀಸೆಲ್‌ಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಕಳೆದ 2-3 ದಿನಗಳಿಂದ ಡಿಪೊಗಳಿಗೆ ಡೀಸೆಲ್‌ ಸರಬರಾಜಾಗದ ಹಿನ್ನೆಲೆಯಲ್ಲಿ ಬಸ್‌ಗಳು ಖಾಸಗಿ ಪೆಟ್ರೋಲ್‌ ಬಂಕ್‌ಗಳಲ್ಲಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿ

ಎಂಟಿಸಿ ಡೀಸೆಲ್‌ ಪೂರೈಕೆಯ ಗುತ್ತಿಗೆಯನ್ನು HPCLಗೆ ನೀಡಿತ್ತು. ಈ ಅವಧಿಯು 2024ರವರೆಗೆ ಚಾಲ್ತಿಯಲ್ಲಿದೆ. ಆದರೆ, HPCLಕಂಪೆನಿಯ ಸಗಟು ಖರೀದಿ ದರವು ಪ್ರತಿ ಲೀಟರ್‌ ಡೀಸೆಲ್‌ಗೆ 119 ರೂ. ಆಗಿತ್ತು. ಚಿಲ್ಲರೆ ಡೀಸೆಲ್‌ ದರವು ಲೀಟರ್‌ಗೆ 87 ರೂ. ಇದೆ.

ಹಾಗಾಗಿ, ಬಿಎಂಟಿಸಿಯು ಕಳೆದ ಎರಡು ತಿಂಗಳಿನಿಂದ ಚಿಲ್ಲರೆ ವ್ಯಾಪಾರಿಗಳಾದ ಖಾಸಗಿ ಬಂಕ್‌ಗಳಿಂದಲೇ ನೇರವಾಗಿ ಡೀಸೆಲ್‌ ಖರೀದಿ ಮಾಡಿ, ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿತ್ತು. ಖಾಸಗಿ ಬಂಕ್‌ಗಳೇ ನಿತ್ಯ ಟ್ಯಾಂಕರ್‌ಗಳಲ್ಲಿ ಡಿಪೊಗಳಲ್ಲಿರುವ ಬಂಕ್‌ಗಳಿಗೆ ಡೀಸೆಲ್‌ ಪೂರೈಸುತ್ತಿದ್ದವು. ಆದರೆ, ಕಳೆದ 2-3 ದಿನಗಳಿಂದ ಡಿಪೊಗಳಲ್ಲಿನ ಬಂಕ್‌ಗಳಿಗೆ ಡೀಸೆಲ್‌ ಪೂರೈಸುವುದನ್ನು ಖಾಸಗಿ ಬಂಕ್‌ಗಳು ಸ್ಥಗಿತಗೊಳಿಸಿವೆ.

Exit mobile version