Site icon PowerTV

ಶಾ ಮಗ BCCI ಕಾರ್ಯದರ್ಶಿ ಬಡವರು ಮಕ್ಕಳು ಸೈನಿಕರು

ಬೆಂಗಳೂರು: ಅಗ್ನಿಪಥ್ ಯೋಜನೆ ದೇಶದ ಯುವಕರ ಬರ್ಬಾದ್ ಮಾಡುತ್ತೆ ಎಂದು ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರಿಗೆ ಕೆಲಸ ಕೊಡ್ತೆವೆ ಅಂತಾರೆ. ಈಗಲೇ ದೇಶದ ಯುವಕರಿಗೆ ಕೆಲಸ ಕೊಡಲು ಆಗುತ್ತಿಲ್ಲ. ಅಗ್ನಿಪಥ್ ಯೋಜನೆಯಲ್ಲಿ ಯಾವುದೇ ರ್ಯಾಂಕ್ ಇಲ್ಲ. ಯುವಕರು ದೇಶ ಸೇವೆ ಮಾಡುವ ಕನಸು ‌ಕಂಡಿರ್ತಾರೆ. ಆದ್ರೆ ಯಾವುದೇ ಭದ್ರತೆ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದರು.

ಇನ್ನು, ನಾಲ್ಕು ವರ್ಷ ಆದ ಮೇಲೆ ಬಿಜೆಪಿ ಆಫೀಸ್ ನಲ್ಲಿ‌ ಕೆಲಸ ಕೊಡ್ತೆವೆ ಅಂತಾರೆ. ಸೆಕ್ಯುರಿಟಿ ಗಾರ್ಡ್ ಕೆಲಸ ಕೊಡ್ತೆವೆ ಅಂತಿದ್ದಾರೆ. ಯುವಕರು ಫುಲ್ ಟ್ರೇನಿಂಗ್ ಆಗಿರ್ತಾರೆ. ನಾಳೆ ದೇಶ ವಿರೋಧಿ ಸಂಘಟನೆ ಸೇರಿದ್ರೆ ಏನ್ ಮಾಡ್ತೀರ. ಈಗಲೇ ಕದ್ದು ಮುಚ್ಚಿ ದೇಶ ವಿರೋಧಿ ಟ್ರೈನಿಂಗ್ ನಡೆಯುತ್ತೆ. ಫುಲ್ ಟ್ರೇನಿಂಗ್ ಆದ ಯುವಕರು ದೇಶ ವಿರೋಧಿಯಲ್ಲಿ ತೊಡಗ್ತಾರೆ. ಅವಾಗ ಯಾವ ಕಡಿವಾಣ ಹಾಕ್ತಿರ ಎಂದು ಹೇಳಿದರು.

ಅದಲ್ಲದೇ, ಅಮೀತ್ ಶಾ ಮಗ ಮಾತ್ರ ಬಿಸಿಸಿಐ ಕಾರ್ಯದರ್ಶಿ ಆಗಬೇಕು. ಬಡವರು ಮಕ್ಕಳು ಸೇನೆ ಸೇರಬೇಕು. ಬಿಜೆಪಿ ಆಡಳಿತದ ರಾಜ್ಯದಲ್ಲಿ ಪರೀಕ್ಷೆ ಪೇಪರ್ ಲೀಕ್ ಆಗ್ತಾ ಇದೆ. ಆಮೇಲೆ ಉದ್ಯೋಗ ರದ್ದು ಮಾಡ್ತೀರ. ಬಿಜೆಪಿ ಸರ್ಕಾರಗಳು ಕೇವಲ ಇಂತಹ ಗೊಲ್ಮಾಲ್ ಕೆಲಸ ಮಾಡುತ್ತಿವೆ. ಅಗ್ನಿಪಥ್ ಯೋಜನೆ ವಿರುದ್ಧ ಬಿ ವಿ ಶ್ರೀನಿವಾಸ್ ಕಿಡಿ ಕಾಡಿದ್ದಾರೆ.

Exit mobile version