Site icon PowerTV

ಪೊಲೀಸ್ ಠಾಣೆಗೆ ಹಾವನ್ನು ತಂದ ಭೂಪ : ಹೌಹಾರಿದ ಪೋಲಿಸಪ್ಪ

ಹುಬ್ಬಳ್ಳಿ: ಇಲ್ಲಿ ಹಳದಿ ಟಿ ಶರ್ಟ್ ಹಾಕೊಂಡಿರುವ ಯುವಕನೊಬ್ಬ ಹುಬ್ಬಳಿ ಕಸಬಾ ಪೇಟೆ ಪೊಲೀಸ್ ಠಾಣೆ ಗೆ ಸಣ್ಣ ಹಾವಿನ ಮರಿ ಒಂದನ್ನ ಹಿಡಿದುಕೊಂಡು ಬಂದು ಅವಾಂತರ ಸೃಷ್ಟಿಸಿದ್ದಾನೆ ಈತನನ್ನು ನೋಡಿ ಇನ್ಸ್​​ ಪೆಕ್ಟರ್ ಹಾಗೂ ಸಿಬ್ಬಂದಿ ಕ್ಷಣ ಕಾಲ ಹೌಹಾರಿ ಬಿಟ್ಟಿದ್ದರು.

ಅನಾಮಿಕನ ಕೈಯಲ್ಲಿ ನಾಗಪ್ಪನ ನೋಡಿದ್ದ ಪೋಲಿಸಪ್ಪ ಮೊದಲು ಇದನ್ನ ತಗೊಂಡ್ ಹೋಗಪ್ಪ  ಪುಣ್ಯಾತ್ಮ ಅಂತ ಹೇಳಿ ಆತನನ್ನ ಜಾಗ ಖಾಲಿ ಮಾಡಿಸಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಕುಚೇಶ್ಟೆಗೋ ಅಥವಾ ಪೊಲೀಸರ ಬಳಿ ಮಾಹಿತಿ ನೀಡಬೇಕು ಅಂತ ಏನೋ ಹಾವಿನ ಸಮೇತ ಬಂದಿದ್ದ ಯುವಕ ಕಸಬಾ ಪೇಟೆ ಪೊಲೀಸರನ್ನ ಮಾತ್ರ ಪಿಕ್ಲಾಟಕ್ಕೆ ಸಿಲುಕಿಸಿಬಿಟ್ಟಿದ್ದ

Exit mobile version