Site icon PowerTV

ಹೈಕಮಾಂಡ್ – ಬಿಎಸ್​​ವೈ ನಡುವೆ ಇನ್ನೂ ನಿಂತಿಲ್ವಾ ಕೋಲ್ಡ್ ವಾರ್..?

ಬೆಂಗಳೂರು: ಹೈಕಮಾಂಡ್ ಮೇಲೆ ಮಾಜಿ ಸಿಎಂ ಯಡಿಯೂರಪ್ಪ ಮುನಿಸುಗೊಂಡಿದ್ದು, ರಾಜ್ಯ ಪ್ರವಾಸಕ್ಕೆ ಇನ್ನೂ ಹೈಕಮಾಂಡ್​ ಗ್ರೀನ್ ಸಿಗ್ನಲ್ ನೀಡಲಿಲ್ಲ.

ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸುತ್ತಾ ನಿಗಮ ಮಂಡಳಿ ಸರ್ಜರಿ? 37 ಮಂದಿ ಬಿಎಸ್ ವೈ ಆಪ್ತರು ನಿಗಮ ಮಂಡಳಿಯಿಂದ ಔಟ್? ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸದಸ್ಯರಿಗೂ ಟೆನ್ಷನ್ ಶುರುವಾಗಿದ್ದು, ಬಿಎಸ್ ವೈ ಆಪ್ತರನ್ನೇ ಟಾರ್ಗೆಟ್ ಮಾಡ್ತಿರೋದೇಕೆ ಎಂದು ಪ್ರಶ್ನೆಯಾಗಿಯೇ ಉಳಿದಿದೆ.

ಇನ್ನು, ಬಿಎಸ್ ವೈ ಆಪ್ತ ಪಡೆಯಲ್ಲಿರೋ 37 ಮಂದಿಗೆ ಕೊಕ್ ನೀಡುವ ಸಾಧ್ಯತೆ ಇದ್ದು, ಒಂದೂವರೆ ವರ್ಷ ಪೂರೈಸಿರೋ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್​ ನಿರ್ಧಾರ ಮಾಡಿತ್ತು. ಆದ್ರೆ ಎಲ್ಲರನ್ನೂ ತೆಗೆದು ಹಾಕುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರೋ ಬಿಎಸ್ ವೈ. ಈಗ ಸಮುದಾಯದಲ್ಲಿ ಹಿಡಿತ ಇಲ್ಲದವರಿಗೆ ನಿಗಮ ಮಂಡಳಿ ಸ್ಥಾನ ನೀಡಿದ್ದು, ಇದೇ ಕಾರಣಕ್ಕೆ ಬಿಎಸ್ ವೈ ಹಾಗೂ ಹೈಕಮಾಂಡ್ ನಡುವಿನ ಮುಸುಕಿನ ಗುದ್ದಾಟ ನಿಂತಿಲ್ಲ. ಮೊದಲ ಹಂತದಲ್ಲಿ 40 ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಕೈ ಹಾಕಿರೋ ಹೈಕಮಾಂಡ್ ನಿಗಮ ಮಂಡಳಿಗಳ ಸರ್ಜರಿಯಿಂದ ಕಮಲ ಪಾಳಯದಲ್ಲಿ ಕಂಪನ ಸಾಧ್ಯತೆ ಇದೆ.

Exit mobile version