Site icon PowerTV

ಟೊಮೊಟಾ ಬೆಲೆ ದಿಢೀರ್ ಇಳಿಕೆ

ಬೆಂಗಳೂರು : ಟೊಮೊಟಾ ಬೆಲೆ ದಿಢೀರ್ ಭಾರಿ ಇಳಿಕೆ ಕಂಡಿದ್ದು, ನೂರರ ಗಡಿ ದಾಟಿದ್ದ ಒಂದು ಕೆಜಿ ಟೊಮಾಟೊ ದರ ಇದೀಗ 40 ರೂ.ಗೆ ಇಳಿದಿದೆ.

ಕಳೆದ ತಿಂಗಳು 100‌ ರೂಪಾಯಿ ಗಡಿ ದಾಟಿದ್ದ ಟೊಮೊಟಾ ಬೆಲೆ ಅಕಾಲಿಕ ಮಳೆ, ಬೆಳೆ ನಾಶ ಕಾರಣದಿಂದ ತೀವ್ರ ಬೆಲೆ ಏರಿಕೆಯಾಗಿತ್ತು. ಆದ್ರೀಗ ಟೊಮೊಟಾ ಬೆಲೆಯಲ್ಲಿ ದಿಢೀರ್ ಕುಸಿತವಾಗಿದ್ದು, 100ರ ಗಡಿ ದಾಟಿದ್ದ ಬೆಲೆ ಈಗ 30ರಿಂದ 40 ರೂಗೆ ಇಳಿದಿದೆ.

ಚಿಕ್ಕಬಳ್ಳಾಪುರ, ಕೋಲಾರ ಹಾಗು ಗ್ರಾಮಾಂತರ ಭಾಗದಿಂದ ಟೊಮೊಟಾ ಸಪ್ಲೈ ಆಗುತ್ತಿದ್ದು, ಮಳೆ ಕಾರಣದಿಂದ ಬೇಡಿಕೆಯಷ್ಟು ಟೊಮೊಟಾ ಸರಬರಾಜು ಆಗ್ತಿದ್ದಿಲ್ಲ. ಇದೀಗ ರಾಜ್ಯ ಹಾಗೂ ನೆರೆ ಮಹಾರಾಷ್ಟ್ರದಿಂದಲೂ ಟೊಮೊಟಾ ಪೂರೈಕೆಯಾಗುತ್ತಿತ್ತು. ಇದರಿಂದ ಅರ್ದದಷ್ಟು ಟೊಮೊಟಾ ಬೆಲೆ ಬೆಲೆ ಕುಸಿತಗೊಂಡಿದೆ.

Exit mobile version