Site icon PowerTV

ಮಹದೇವಪ್ಪರಿಂದ ಅಭಿವೃದ್ಧಿ ಪಾಠ ಬೇಡ: ಪ್ರತಾಪಸಿಂಹ

ಮೈಸೂರು :ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪರಿಂದ ಅಭಿವೃದ್ಧಿ ಪಾಠ ಬೇಡ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ವಾಗ್ದಾಳಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಅಭಿವೃದ್ಧಿ ಬಗ್ಗೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡಿದ್ದರೆ ತಾನೇ ಚರ್ಚೆ ಮಾಡುವುದು ಎಂದು ಮಹದೇವಪ್ಪ ಅವರ ಹೇಳಿಕೆಗೆ ಸಂಸದ  ಪ್ರತಾಪಸಿಂಹ ತಿರುಗೇಟಿದ್ದಾರೆ.

ಇನ್ನು ಅವರು ಈ ರೀತಿ ಬೊಗಳೆ ಬಿಟ್ಟಿದ್ದಕ್ಕೆ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ನನ್ನನ್ನು ಎರಡನೇ ಬಾರಿ ಆಯ್ಕೆ ಮಾಡಿದ್ದಾರೆ. ಕೆಲಸ ಮಾಡಿದ್ದರೆ ಟಿ. ನರಸೀಪುರದ ಜನ ಅವನನ್ನು , ಚಾಮುಂಡೇಶ್ವರಿ ಕ್ಷೇತ್ರದ ಜನ ಸಿದ್ದರಾಮಯ್ಯನವರನ್ನು ಏಕೆ ಸೋಲಿಸುತ್ತಿದ್ದರು. ಅಲ್ಲದೇ ಅವರಿಗೆ ಊರು ಬಿಡುವ ಪರಿಸ್ಥಿತಿ ಯಾಕೆ ಬರುತ್ತಿತ್ತು ಎಂದು ಕಿಡಿಕಾಡಿದರು.

ಅಭಿವೃದ್ಧಿ ಚರ್ಚೆಗೆ ಪಂಥಾಹ್ವಾನ‌ ಕೊಟ್ಟಿದ್ದೇನೆ. ದಂಡು ದಾಳಿ ಸಮೇತ ಚರ್ಚೆಗೆ ಬನ್ನಿ.ನಾನು ಒಬ್ಬನೇ ಸಾಕ್ಷಿ ಸಮೇತ ಬರುತ್ತೇನೆ. ಚರ್ಚೆಗೆ ಬರದೇ ಮಾಧ್ಯಮದ ಕ್ಯಾಮೆರಾ ಮುಂದೆ ಬೊಗಳೆ ಬಿಡಬೇಡಿ.ಮಾತಿಗಿಂತ ನಿಮ್ಮದು ಉಗುಳೆ ಜಾಸ್ತಿಯಾಗಿದೆ. ಇದನ್ನು ಬಿಟ್ಟು ಚರ್ಚೆಗೆ ಬನ್ನಿ ಅಲ್ಲೇ ನಿಮ್ಮನ್ನು ಸೋಲಿಸುತ್ತೇನೆ. ಜಲದರ್ಶಿನಿ ಬಳಿ 6 ಪಥದ ರಸ್ತೆಗೆ ಮಹದೇವಪ್ಪರ ಅವಧಿಯಲ್ಲಿ 12 ಕೋಟಿ ಬಿಡುಗಡೆಯಾಗಿದೆ. ಆದರೆ, ಯಾವುದೇ ರಸ್ತೆ ಮಾಡಿಸಿಲ್ಲ. ಇಂತಹ ಮಹದೇವಪ್ಪರಿಂದ ಅಭಿವೃದ್ಧಿ ಪಾಠ ಬೇಡ ಎಂದು ಗುಡುಗಿದ್ದಾರೆ.

Exit mobile version