Site icon PowerTV

ಠಾಕ್ರೆಗೆ ಎಚ್ಚರಿಕೆ‌ ಕೊಟ್ಟ ಏಕನಾಥ್ ಶಿಂಧೆ & ಗ್ಯಾಂಗ್

ಮುಂಬೈ : ಮಹಾರಾಷ್ಟ್ರದ MVA ಸರ್ಕಾರದ ವಿರುದ್ಧ ರಿಬೆಲ್ ಶಾಸಕ ಶಿಂಧೆ ಕಿಡಿಕಾಡಿದ್ದಾರೆ.

ರಿಬೆಲ್ ಶಾಸಕರ ಕುಟುಂಬಗಳಿಂದ ಭದ್ರತೆ ಹಿಂಪಡೆದ ಸರ್ಕಾರ. ಸಿಎಂ ಠಾಕ್ರೆ ಹಾಗೂ ಇನ್ನುಳಿದ ಆಡಳಿತಕ್ಕೆ ಶಿಂಧೆ ಪತ್ರ ಬರೆದಿದ್ದಾರೆ. ಜನಪ್ರತಿನಿಧಿಗಳಾದ ನಮಗೆ ಭದ್ರತೆ ಅವಶ್ಯಕ. ಮಹಾರಾಷ್ಟ್ರದಲ್ಲಿ ನಮ್ಮ ಕುಟುಂಬಳಿಗೆ ಭದ್ರತೆ ಒದಗಿಸಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು, ಶಿವಸೇನೆಯ ಸಂಜಯ ರಾವತ್ ಈಗಾಗಲೇ ನಮಗೆ ಧಮ್ಕಿ ಹಾಕಿದ್ದಾರೆ. ನಮ್ಮ‌ ಕುಟುಂಬಕ್ಕೆ ಹೆಚ್ಚು ಕಡಿಮೆ ಆದಲ್ಲಿ ಯಾರು ಜವಾಬ್ದಾರರು ? MVA ಒಕ್ಕೂಟದ ಗೂಂಡಾಗಳಿಂದ ನಮ್ಮ ಕುಟುಂಬಗಳಿಗೆ ಆತಂಕ ಸೃಷ್ಟಿಯಾಗಿದೆ. ಆದಷ್ಟು ತಕ್ಷಣ ನಮ ಎಲ್ಲ ಶಾಸಕರ ಕುಟುಂಬಗಳಿಗೆ ಭದ್ರತೆ ಒದಗಿಸಿ. ಪಂಜಾಬ್​​ನಲ್ಲಿ ಸಿದ್ದು ಮೂಸೆವಾಲಾ ಭದ್ರತೆ ಹಿಂಪಡೆದಾಗ ಅವರ ಕೊಲೆ ನಡೆಯಿತು. ಹಾಗಾಗಿ ನಮ್ಮ‌ ಕುಟುಂಬಗಳ ಮೇಲೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಠಾಕ್ರೆಗೆ ಏಕನಾಥ್ ಶಿಂಧೆ & ಗ್ಯಾಂಗ್ ಎಚ್ಚರಿಕೆ‌ ಕೊಟ್ಟಿದ್ದಾರೆ.

Exit mobile version