Site icon PowerTV

ಬಿಜೆಪಿ-ಜೆಡಿಎಸ್ ಒಂದು ನಾಣ್ಯದ ಎರಡು ಮುಖ ಇದ್ದಾಗೆ : ಧೃವನಾರಾಯಣ್

ಮಂಡ್ಯ : ಜೆಡಿಎಸ್-ಬಿಜೆಪಿ ಒಟ್ಟಾಗಿ ಚುನಾವಣೆಗೆ ಬರ್ತಾರೆ ಅವರನ್ನ ಎದುರಿಸುವ ಕೆಲಸ ನಮ್ಮದಾಗಬೇಕು ಎಂದು ಮಂಡ್ಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಒಟ್ಟಾಗಿ ಚುನಾವಣೆಗೆ ಬರ್ತಾರೆ ಅವರನ್ನ ಎದುರಿಸುವ ಕೆಲಸ ನಮ್ಮದಾಗಬೇಕು. ಸಂಕಲ್ಪ ಮಾಡಿ ಕಾಂಗ್ರೆಸ್ ಮತಷ್ಟು ಸದೃಢವಾಗಬೇಕು. ಚಿಂತನ ಸಭೆಯ ಬಗ್ಗೆ ಪ್ರಾಮುಖ್ಯತೆಯನ್ನ ಹರಿಯಬೇಕು. ಚುನಾವಣೆ ಹತ್ತಿರ ಬರುತ್ತಿದೆ, ಅದ್ರೂ ಯಾರಲ್ಲು ಉತ್ಸವ ಕಾಣುತ್ತಿಲ್ಲ. ಪಕ್ಷದ ಬಗ್ಗೆ ಬದ್ದತ್ತೆ ಕಾಣುತ್ತಿಲ್ಲ, ಅದನ್ನ ಕಾಣಬೇಕು. ನಮ್ಮ ನಮ್ಮ ಸ್ಥಾನಮಾನಗಳಿಗಾಗಿ ಅಲ್ಲ ಪಕ್ಷಕ್ಕಾಗಿ ದುಡಿಯಬೇಕು ಎಂದರು.

ಇನ್ನು, ಪಕ್ಷ ಸಂಘಟನೆ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶ ಇದೆ ಮಾತನಾಡಿ. ಮುಂದಿನ 2023 ಕ್ಕೆ ನಮ್ಮ ಸರ್ಕಾರ ತರಲು ಯಾವ ಯಾವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಅನ್ನೊದರ ಬಗ್ಗೆ ಚಿಂತನೆ ಮಾಡಬೇಕು. ಮಂಡ್ಯ ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಚುನಾವಣೆಯನ್ನ ಗೆದ್ದಿದ್ದಿರಿ. ಮಧು ಜಿ ಮಾದೇಗೌಡರನ್ನು ಗೆಲ್ಲಿಸಿದ್ದಿರಿ. ಮಂಡ್ಯದವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದಿರಿ. ಮುಂದಿನ ಚುನಾವಣೆಗೆ ಗೆಲ್ಲಲ್ಲು ಎಲ್ಲರು ಸಹ ಚಿಂತನೆ ಮಾಡಬೇಕು ಎಂದು ಹೇಳಿದರು.

ಅದಲ್ಲದೇ, ಭಾರತ್ ಜೋಡೊ ಪಾದಯಾತ್ರೆ ಕಾರ್ಯಕ್ರಮ ಶುರುವಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಮಾಡಬೇಕು. 70 ವರ್ಷಗಳ ಕಾಲ ಕಾಂಗ್ರೆಸ್ ಮಾಡಿದ ಸಾಧನೆ ಬಗ್ಗೆ ಜನಜಾಗೃತಿ ಮಾಡಬೇಕು. ನಮ್ಮ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ನಾವು ಪಾದಯಾತ್ರೆ ಮಾಡಿ. ಮುಂದಿನ ದಿನಗಳಲ್ಲಿ ನಮಗೆ ಪ್ರತಿಫಲ ಸಿಗುತ್ತದೆ, ನೀವೆ ನೋಡ್ತಿರಾ. ರಾಜ್ಯದಲ್ಲಿ ಕಾಂಗ್ರೆಸ್ 72 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ಇದು ಹಿಂದಿನ ಕಾಲ ಅಲ್ಲ, ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತೆ. ನಾವು ಕೂಡ ಚುನಾವಣೆ ತಂತ್ರವನ್ನ ಬದಲಾವಣೆ ಮಾಡಿಕೊಳ್ಳಬೇಕು. ಗಂಭೀರವಾಗಿ ಚುನಾವಣೆಯನ್ಮ ತೆಗೆದುಕೊಳ್ಳಿ. ಬಿಜೆಪಿ-ಜೆಡಿಎಸ್ ಒಂದು ನಾಣ್ಯದ ಎರಡೂ ಮುಖ. ಒಂದಾಗಿದ್ದಾರೆ, ಅವರು ಒಂದಾಗಿ ಚುನಾವಣೆಗೆ ಬರ್ತಾರೆ. ನಾವು ಅವರನ್ನ ಎದುರಿಸುವ ಕೆಲವನ್ನ ತೊಡಗಿ ನಾವು ಗೆಲ್ಲಬೇಕು ಎಂದು ಹೇಳಿದರು.

Exit mobile version