Site icon PowerTV

ತಮಟೆ ಸೌಂಡಿಗೆ ಅಜ್ಜಿಯ ಭರ್ಜರಿ ಡ್ಯಾನ್ಸ್

ಚಾಮರಾಜನಗರ: ವಯಸ್ಸು 40 ಆಯಿತೆಂದರೆ ಕಾಲು ನೋವು, ಸೊಂಟ ನೋವು ಎಂದು ಪೇಚಾಡಿಕೊಳ್ಳುವವರ ನಡುವೆ 81 ವರ್ಷದ ವೃದ್ಧೆಯೊಬ್ಬರು ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ‌.

ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ಇಂದು ಭಗೀರಥ ಜಯಂತಿ ಕಾರ್ಯಕ್ರಮ ನಡೆದಿದ್ದು, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಮಾಡಲಾಗಿತ್ತು.

ಈ ವೇಳೆ ತಮಟೆ ಬಾರಿಸುತ್ತಿದ್ದ ಸದ್ದಿಗೆ ಜೋಶ್​​ಗೊಂಡು ವೃದ್ಧೆ ಮೊಳೆಯಮ್ಮ ಎಂಬುವರು ಡ್ಯಾನ್ಸ್ ಮಾಡಿ ಯುವಕರು ಹುಬ್ಬೇರುವಂತೆ ಮಾಡಿದ್ದಾರೆ.

Exit mobile version