Thursday, September 18, 2025
HomeUncategorizedವಿದೇಶಿ ಮಿತ್ರರಿಗೆ ಕ್ರೈಂ ಅಡ್ಡ ಆಗ್ತಿದ್ಯಾ ಬೆಂಗಳೂರು..?

ವಿದೇಶಿ ಮಿತ್ರರಿಗೆ ಕ್ರೈಂ ಅಡ್ಡ ಆಗ್ತಿದ್ಯಾ ಬೆಂಗಳೂರು..?

ಬೆಂಗಳೂರು: ಅವರಿಬ್ಬರೂ ನಮ್ಮ ದೇಶದವರಲ್ಲ. ಮತ್ತೊಬ್ಬ ನಮ್ಮ ರಾಜ್ಯದವನೂ ಅಲ್ಲ. ಹೀಗೆ ನಮ್ಮವರಲ್ಲದ ಇವರು ಬೆಂಗಳೂರಿನಲ್ಲಿ ತಮ್ಮ ಸೈಬರ್ ಕ್ರೈಂ ಕರಾಮತ್ತು ತೋರಿಸ್ತಾ ಇದ್ರು. ಹೀಗೆ ಎಲ್ಲಿಂದಲೋ ಬಂದು ರಾಜಧಾನಿಯಲ್ಲಿ ಸೈಬರ್ ಕ್ರೈಂ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು ಹಾಗೂ ಓರ್ವ ಮಣಿಪುರದವನನ್ನ ಈಶಾನ್ಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿ ಬಂಧಿತರಾಗಿರುವ ಮೂವರು ನಮ್ಮ ರಾಜ್ಯದವರಲ್ಲ.. ಇಬ್ಬರು ವಿದೇಶಿ ಪ್ರಜೆಗಳಾದರೆ, ಇನ್ಮೊಬ್ಬ ನಮ್ಮದೆ ದೇಶದ ಮಣಿಪುರ ರಾಜ್ಯದವನು.‌ ಆದರೆ ಈ ಮೂವರು ಸೇರಿಕೊಂಡು ರಾಜಧಾನಿ ಬೆಂಗಳೂರಲ್ಲಿ‌ ಸೈಬರ್ ಕ್ರೈಂ ಮಾಡ್ತಾ ಇದ್ರು ಅಂದ್ರೆ ನೀವು ನಂಬಲೇಬೇಕು. ಮಣಿಪುರದ ಮೋನಿ ಎಂಬಾತನಿಂದ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಮಾಡಿಸಿಕೊಳ್ತಾ ಇದ್ದ. ಇಬ್ಬರು ವಿದೇಶಿ ಪ್ರಜೆಗಳು ನಗರದಲ್ಲಿ ವಿವಿಧ ರೀತಿಯ ಸೈಬರ್ ಕ್ರೈಂ ಮಾಡ್ತಾ ಇದ್ದು, ಸದ್ಯ ಮೂವರನ್ನು ಪೊಲೀಸರು ಬಲೆಗೆ ಬೀಳಿಸಿದ್ದಾರೆ.

ಅಫ್ರಿಕಾ ಮೂಲದ ಪ್ರಜೆಗಳಿಗೂ ಹಾಗೂ ಮಣಿಪುರದ ಮೋನಿಕುಮಾರ್​​​​ಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿತ್ತು. ನಂತರ ಅಲ್ಲಿಯ ಬುಡಕಟ್ಟು ಜನಾಂಗದ ಜನರಿಗೆ ಸ್ವಲ್ಪ ಹಣಕಾಸಿನ ಆಸೆ ತೋರಿಸಿ ಅವರ ದಾಖಲಾತಿಗಳನ್ನ ಪಡೆದು ಅವರ ಹೆಸರಲ್ಲಿ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ತೆರೆಯುತ್ತಿದ್ದ.‌ ನಂತರ ಅದಕ್ಕೆ ಡೆಬಿಟ್ ಕಾರ್ಡ್ ಪಡೆದುಕೊಳ್ತಾ ಇದ್ದ. ಹೀಗೆ ತೆಗೆದುಕೊಂಡ ಸಿಮ್ ಕಾರ್ಡ್, ಡೆಬಿಟ್ ಕಾರ್ಡ್ ಗಳನ್ನ ಮೋನಿ‌ಕುಮಾರ್ ಸೋ್ಪ್ ಬಾಕ್ಸ್ ಸಮೇತ ನಗರದಲ್ಲಿದ್ದ ಇಬ್ಬರು ಅಫ್ರಿಕಾ ಪ್ರಜೆಗಳಿಗೆ ಕೊರಿಯರ್ ಮಾಡ್ತಾ ಇದ್ದ. ಹೀಗೆ ಮಣಿಪುರ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಬಳಸಿ ಇಬ್ಬರು ಅಫ್ರಿಕಾ ಪ್ರಜೆಗಳು ನಗರದಲ್ಲಿ ಗಿಪ್ಟ್ ಕಾರ್ಡ, ಸೇರಿ ತರಹಾವೇರಿ ಸೈಬರ್ ಕ್ರೈಂ ಮಾಡಿ ಜನರಿಗೆ ವಂಚಿಸಿ ಮಣಿಪುರದ ಬುಡಕಟ್ಟು ಜನರ ಹೆಸರಿನಲ್ಲಿದ್ದ ಖಾತೆಗಳಿಗೆ ಹಣ ಹಾಕಿಸಿಕೊಳ್ತಾ ಇದ್ರು. ನಂತರ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ತಾ ಇದ್ದರು.

ಸದ್ಯ ಸತತ ಪ್ರಯತ್ನದ ಬಳಿಕ ಈಶಾನ್ಯ ವಿಭಾಗದ ಸೆನ್ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿ ಪರಪ್ಪನ ಆಗ್ರಹಾರ ಜೈಲಿಗೆ ಅಟ್ಟಿದ್ದು ತನಿಖೆ ಮುಂದುವರೆಸಿದ್ದಾರೆ.

ಅಶ್ವತ್ ಎಸ್ ಎನ್ ಜತೆ ವಿಠ್ಠಲ್ ಕ್ಯಾರವಾಡ ಕ್ರೈಂ ಬ್ಯೂರೋ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments