Site icon PowerTV

ಅಯೋಧ್ಯೆ ಬಳಿಕ ಬಿಜೆಪಿಯವರು ಅಂಜನಾದ್ರಿ ಟಾರ್ಗೆಟ್ ಮಾಡ್ತಿದ್ದಾರೆ : MLC ಶ್ರೀನಾಥ್

ಕೊಪ್ಪಳ : ನಾನು ಜುಲೈ ಮೂರರಂದು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾಜಿ MLC ಶ್ರೀನಾಥ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡಾ ಗಂಗಾವತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಸೇರೋ ವಿಚಾರವಾಗಿ ಇದುವರೆಗೂ ನಾನು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಜೊತೆ ಮಾತನಾಡಿಲ್ಲ. ನಮ್ಮ ಹಿರಿಯರು ಇಬ್ಬರನ್ನು ಸರಿ ಮಾಡ್ತಾರೆ ಎಂದರು.

ಇನ್ನು, ಕಳೆದ ಬಾರಿ ಚುನಾವಣೆಯಲ್ಲಿ ಅನ್ಸಾರಿ ವಿರುದ್ದ ಬಂಡಾಯವೆದ್ದು ಕಾಂಗ್ರೆಸ್​ನಿಂದ ಜೆಡಿಎಸ್ ಸೇರಿದ್ದ ಶ್ರೀನಾಥ್ ಇದೀಗ ಮತ್ತೆ ಕೈ ಪಾಳಯಕ್ಕೆ ಸೇರಲಿದ್ದಾರೆ. ಆದ್ರೂ ಗಂಗಾವತಿ ಮಾಜಿ ಶಾಸಕ‌ ಇಕ್ಬಾಲ್ ಅನ್ಸಾರಿ,ಶ್ರೀನಾಥ್ ನಡುವೆ ಮುಂದುವರೆದ ಮುಸುಕಿನ ಗುದ್ದಾಟ ನಡೆಸಿದ್ದು, ನಾನು ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿದರು.

ಅದಲ್ಲದೇ, ಮುಸಲ್ಮಾನರಿಗೆ ಟಿಕೆಟ್ ಕೊಡಬಾರದು ಅಂತೇನಿಲ್ಲ. ಅಯೋಧ್ಯೆ ಬಳಿಕ ಬಿಜೆಪಿಯವರು ಅಂಜನಾದ್ರಿ ಟಾರ್ಗೆಟ್ ಮಾಡಿದ್ದು, ನಾವು ಅದನ್ನ ಎದುರಿಸುತ್ತೇನೆ, ದೇಶದಲ್ಲಿ ಹಿಂದೂ ಮುಸ್ಲಿಂ ಬೇರೆ ಮಾಡೋ ಕುತಂತ್ರ ನಡೆಯುತ್ತಿದೆ. ಗಂಗಾವತಿಯಲ್ಲೂ ಕೋಮು ಗಲಭೆ ನಡೆಯುತ್ತೆ ಆದರೆ ಈ ಬಾರಿ ಅದಕ್ಕೆ ಅವಕಾಶ ಕೊಡಲ್ಲ ಎಂದರು.

Exit mobile version