Site icon PowerTV

ಸರ್ಕಾರದ ವಿರುದ್ಧ ದಿನೇಶ್​​​​ ಗುಂಡೂರಾವ್ ಕಿಡಿ

ಬೆಂಗಳೂರು: ಸರ್ಕಾರ ಅಸಂವಿಧಾನಿಕವಾಗಿ ಉರುಳಿಸುವ ಕೆಟ್ಟ ಸಂಪ್ರದಾಯ ಶುರುವಾಗಿದ್ದೇ ಕರ್ನಾಟಕದಲ್ಲಿ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಆಪರೇಷನ್ ಕಮಲದ ಜನಕ ಯಡಿಯೂರಪ್ಪನವರು ಸೃಷ್ಟಿಸಿದ ಪಿಡುಗನ್ನು‌‌ ಇಂದು ದೇಶಾದ್ಯಂತ BJPಯವರು ಹಬ್ಬಿಸ್ತಿದ್ದಾರೆ.

ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದು, ಇಂತಹ ಪಿಡುಗಿಗೆ ಜನರೇ ಕಡಿವಾಣ ಹಾಕಬೇಕು. ಅದಲ್ಲದೇ, ನಾ ಖಾವೂಂಗಾ, ನಾ ಖಾನೇ ದೂಂಗಾ ಎಂದು ಪ್ರಧಾನಿ ಮೋದಿ ಬೊಗಳೆ ಭಾಷಣ ಬಿಗಿಯುತ್ತಾರೆ. ಆದ್ರೆ, ಆಪರೇಷನ್ ಕಮಲಕ್ಕೆ ಸುರಿಯುವ ಸಾವಿರಾರು ಕೋಟಿ ಹಣವನ್ನ ತಿಂದು ವಿಸರ್ಜಿಸಿದ್ದು ಯಾರು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳ್ತಾರಾ..? ಆಪರೇಷನ್ ಕಮಲಕ್ಕೆ ಬಳಸಿರೋ ಹಣದ ಬಗ್ಗೆ ED ತನಿಖೆಗೆ ಆದೇಶಿಸಲು ಸಾಧ್ಯನಾ..? ಎಂದು ಟ್ವೀಟ್ ಮೂಲಕ ಪ್ರಧಾನಿ ಮೋದಿಯವರ ಪ್ರಾಮಾಣಿಕತೆಗೆ ದಿನೇಶ್ ಗುಂಡೂರಾವ್ ಸವಾಲ್ ಹಾಕಿದ್ದಾರೆ.

Exit mobile version