Site icon PowerTV

ನಟಿ ವೇದಿಕಾಗೆ ಕೊರೋನಾ ಪಾಸಿಟಿವ್ !

ಹ್ಯಾಟ್ರಿಕ್‌ ಹೀರೊ ಶಿವರಾಜ್ ಕುಮಾರ್ ಜೊತೆ ಶಿವಲಿಂಗ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ವೇದಿಕಾಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.ಸ್ವತಃ ವೇದಿಕಾ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜ್ವರದಿಂದ ಬಳಲುತ್ತಿರುವ ಅವರು, ಅಗತ್ಯ ಚಿಕಿತ್ಸೆಯನ್ನೂ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಅದಲ್ಲದೇ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿರುವ ಅವರು, ಇದೇ ಮೊದಲ ಬಾರಿಗೆ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನನ್ನ ದುರಾದೃಷ್ಟ ಎಂದು ನೋವು ಹಂಚಿಕೊಂಡಿದ್ದಾರೆ.

ಇನ್ನು, ವೇದಿಕಾ ಶಿವಲಿಂಗ ಚಿತ್ರದಲ್ಲಿ ಶಿವಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದು, ಕನ್ನಡ ಸಂಗಮ, ಹೋಮ್ ಮಿನಿಸ್ಟರ್, ಗೌಡರ ಹೋಟೆಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು, ನಾನು ಮೈಕೈ ನೋವಿನಿಂದಲೂ ನರಳುತ್ತಿದ್ದೇನೆ ಎಂದು ಅವರು ಟ್ವೀಟರ್‌ ನಲ್ಲಿ ಹಂಚಿಕೊಂಡಿದ್ದಾರೆ.

Exit mobile version