Site icon PowerTV

ED ವಿಚಾರಣೆ ನಡೆಯುತ್ತಿರುವಾಗ್ಲೇ ಕೈ’ ಪಡೆ ಡಬಲ್‌ ಗೇಮ್‌..!

ನವದೆಹಲಿ : ನ್ಯಾಷನಲ್‌ ಹೆರಾಲ್ಡ್‌ ಕೇಸ್‌ ವಿಚಾರದಲ್ಲಿ ರಾಹುಲ್‌ ಗಾಂಧಿಗೆ ED ಈಟಿ ಚುಚ್ಚುತ್ತಿದೆ. ಈ ಮಧ್ಯೆ, ಆಸ್ಪತ್ರೆಯಲ್ಲಿದ್ದ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಸ್ಟಾರ್ಚ್‌ ಆಗಿದ್ದಾರೆ.

ಈಗಾಗಲೇ ಜಾರಿನಿರ್ದೇಶನಾಲಯದಿಂದ ರಾಹುಲ್‌ ಗಾಂಧಿ ವಿಚಾರಣೆ ಸತತವಾಗಿ ನಡೆಯುತ್ತಿದೆ.. ಈ ಮಧ್ಯೆ, ತಾಯಿ ಸೋನಿಯಾಗಾಂಧಿಗೆ ಜೂನ್ 23ರಂದು ವಿಚಾರಣೆಗೆ ಬನ್ನಿ ಎಂದು ಸಮನ್ಸ್‌ ನೀಡಿದೆ ಜಾರಿನಿರ್ದೇಶನಾಲಯ.. ಈ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆಗೆ ಮತ್ತೊಂದು ಸುತ್ತಿನ ವೇದಿಕೆ ಸಿದ್ದಪಡಿಸಿದೆ. ರಾಹುಲ್‌ ಗಾಂಧಿಗೆ ಇಡಿ ವಿಚಾರಣೆ ಆರಂಭವಾದಾಗಿನಿಂದ ಕಾಂಗ್ರೆಸ್‌ ರೋಷಾವೇಶ ಜೋರಾಗಿದೆ. ಇದ್ರ ಮಧ್ಯೆ ಸೋನಿಯಾ ವಿಚಾರಣೆ ವೇಳೆ ಇನ್ನಷ್ಟು ಕಿಚ್ಚು ಹೊತ್ತಿಸಲು ಕೈ ಪಡೆ ಸಿದ್ಧವಾಗಿದೆ.

ಸೈನಿಕರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ ಹೊಸ ಅಗ್ನಿಪಥ್ ಯೋಜನೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನ ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್‌ ಮುಂದಾಗಿದೆ. ಎಲ್ಲಾ ರಾಜ್ಯಗಳ ಪಕ್ಷದ ಅಧ್ಯಕ್ಷರು‌ ಹಾಗೂ ಸಿಎಲ್‌ಪಿ ನಾಯಕರನ್ನು ದೆಹಲಿಗೆ ಬರುವಂತೆ ತಿಳಿಸಲಾಗಿತ್ತು.. ಪಕ್ಷದ ಎಲ್ಲಾ ರಾಜ್ಯಗಳ ಶಾಸಕರಿಗೂ ದೆಹಲಿಗೆ ಬರುವಂತೆ ತುರ್ತು ಬುಲಾವ್ ನೀಡಿದೆ.

ದೆಹಲಿಯ ಎಐಸಿಸಿ ಕಚೇರಿ ಮುಂದೆ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿದ್ರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ವಾಕಥಾನ್‌ನಲ್ಲೂ ಪಕ್ಷದ ಬಾವುಟ ಹಿಡಿದು ಭಾಗಿಯಾದ್ರು.

ಇತ್ತ, ಬಿಹಾರ, ಯುಪಿ, ಜಾರ್ಖಂಡ್, ಹರಿಯಾಣ ಹಾಗೂ ದೆಹಲಿಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ..‌ ರಾಜ್ಯದಲ್ಲೂ ಧಾರವಾಡ, ಬೆಳಗಾವಿಯಲ್ಲಿ ಯುವಕರು ಬೀದಿಗಿಳಿದಿದ್ದಾರೆ. ಖಾನಾಪುರದಲ್ಲಿ ಕಾಂಗ್ರೆಸ್ ಶಾಸಕಿ ವಾಲೆಂಟರಿಯಾಗಿ ಯುವಕರ ಬೆಂಬಲಕ್ಕೆ ನಿಂತಿದ್ದಾರೆ..ಆದ್ರೆ, ರಾಜಕೀಯ ಪಕ್ಷಗಳು ಮಾತ್ರ ಇಲ್ಲಿಯವರೆಗೆ ಹೋರಾಟಕ್ಕೆ ಬೆಂಬಲಿಸಿಲ್ಲ.. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೂಡ ಇಲ್ಲಿಯವರೆಗೆ ಸೈಲೆಂಟಾಗಿದೆ.. ಯೋಜನೆಯ ಸಾಧಕ ಬಾಧಕಗಳನ್ನು ಅರಿಯದೆ ಹೇಗೆ ಬೆಂಬಲಿಸೋದು ಎಂಬ ಅಭಿಪ್ರಾಯಕ್ಕೆ ಬಂದಿತ್ತು..ಆದ್ರೀದ, ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ರಾಜಕೀಯವಾಗಿ ಲಾಭ ಪಡೆಯಲು ಪ್ರಯತ್ನಿಸಿದೆ.

ರಾಘವೇಂದ್ರ ವಿಎನ್ ಜೊತೆ ಸಂತೋಷ್‌ ಹೊಸಹಳ್ಳಿ ಪವರ್‌ ಟಿವಿ

Exit mobile version