Site icon PowerTV

ಪವರ್ ಟಿವಿ ವರದಿಗೆ ಎಚ್ಚೆತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ಗೊರಗೊಂಡನಹಳ್ಳಿ ಗ್ರಾಮದಲ್ಲಿ ವೈ.ಟಿ.ರಸ್ತೆ‌ಸೇತುವೆ ಕಾಮಗಾರಿ ಮುಗಿದಿಲ್ಲ ಎಂಬ ಕಾರಣವೊಡ್ಡಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ವಿದ್ಯಾರ್ಥಿಗಳನ್ನ ಕೆಳಗಿಳಿಸಿ ಎರಡು ಕಿಮೀ ನಡೆದು ಸಾಗುವಂತೆ ಮಾಡಿದ್ರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ವಕ್ಷೇತ್ರದಲ್ಲೇ ಈ ಘಟನೆ ನಡೆದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಇನ್ನೂ ಇದೇ ವಿಚಾರವಾಗಿ ಪವರ್ ಟಿವಿಯಲ್ಲಿ ಜೂನ್ 19 ರಂದು ವರದಿ ಪ್ರಸಾರವಾಗಿತ್ತು ಪವರ್ ಟಿವಿ ಶಿಕ್ಷಣ ಸಚಿವರ ಸ್ವಕ್ಷೇತ್ರದಲ್ಲೇ ಮಕ್ಕಳ ಗೋಳು ಕೇಳೊರಿಲ್ಲಾ ಅಂತಾ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಥಳಕ್ಕೇ ಭೇಟಿ ನೀಡಿ ಸೇತುವೆ ಕಾಮಗಾರಿಯನ್ನ ವೀಕ್ಷೀಸಿ ತಾತ್ಕಾಲಿಕ ರಸ್ತೆ ಕಲ್ಪಿಸುವ ಕೆಲಸ ಮಾಡಿದ್ದಾರೆ.

ಅದಲ್ಲದೇ, ಸ್ಥಳದಲ್ಲೇ ನಿಂತು ಜೆಸಿಬಿ ತರಿಸಿ ಸೇತುವೆ ಮುಂಭಾಗವಿದ್ದ ಮಣ್ಣು ತೆರವುಗೊಳಿಸಿ ವೈ.ಟಿ.ರಸ್ತೆ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನಿನ್ನೇಯಿಂದ ವಿದ್ಯಾರ್ಥಿಗಳು ತುಂಬಿದ ಕೆಎಸ್ ಆರ್ ಟಿ ಸಿ ಬಸ್ ತಿಪಟೂರು ಬಸ್ ನಿಲ್ದಾಣಕ್ಕೆ ಬರುತ್ತಿದ್ದು ವಿದ್ಯಾರ್ಥಿಗಳು ಸಾರ್ವಜನಿಕರು ಪುಲ್ ಖುಷ್ ಆಗಿದ್ದಾರೆ.

Exit mobile version