Site icon PowerTV

ಪ್ರಧಾನಿ ಮೋದಿಗಾಗಿ ತಯಾರಾಗಿದೆ ವಿಶೇಷ ಮೈಸೂರು ಪೇಟ

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್‌ ತೊಡುತ್ತಿದ್ದ ಮೈಸೂರು ಪೇಟದ ಮಾದರಿಯಲ್ಲಿ ಪ್ರಧಾನಿ ಮೋದಿಗಾಗಿ ವಿಶೇಷ ಮೈಸೂರು ಪೇಟ ಸಜ್ಜಾಗಿದೆ.

ಮೈಸೂರಿನ ಕಲಾವಿದ ನಂದನ್ ಕೈ ಚಳಕದಲ್ಲಿ ಮೈಸೂರು ಪೇಟ ಮತಯಾರಾಗುತ್ತಿದ್ದು, ಮಹಾರಾಜ ಗ್ರೌಂಡ್‌ನಲ್ಲಿ ಮೋದಿಗೆ ಹಾಕುವಂತೆ ಸಂಸದ ಪ್ರತಾಪ್‌ಸಿಂಹಗೆ ಪೇಟ ಹಸ್ತಾಂತರಿಸಲು ನಿರ್ಧಾರ ಮಾಡಿದ್ದಾರೆ.

ಅದಲ್ಲದೇ, ರೇಷ್ಮೆ, ಬನಾರಸ್ ಮುತ್ತು ಹವಳದೊಂದಿಗೆ ಈ ಪೇಟವನ್ನು ತಯಾರಿಸಿದ್ದಾರೆ. ಮೈಸೂರಿಗೆ ಬರುವ ಮೋದಿಗೆ ಪೇಟದ ಮೂಲಕ ಗೌರವಿಸಬೇಕೆಂದು ವಿಶೇಷ ಪೇಟ ತಯಾರು ಮಾಡಿದ್ದು, ಪವರ್ ಟಿವಿಗೆ ಕಲಾವಿದ ನಂದನ್ ಹೇಳಿದ್ದಾರೆ.

Exit mobile version