Site icon PowerTV

4ನೇ ದಿನದ ಇಡಿ ವಿಚಾರಣೆಗೆ ರಾಹುಲ್‍ಗಾಂಧಿ ಹಾಜರ್

ನವದೆಹಲಿ : ಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಇಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗಿ, ನಾಲ್ಕನೆ ದಿನದ ವಿಚಾರಣೆ ಎದುರಿಸಿದರು.

ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಮತ್ತು ವಿವಾದಿತ ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಮುಂದುವರೆಸಿದ್ದು, ಕಾಂಗ್ರೆಸ್‍ನ ಸಂಸದರ ನಿಯೋಗ ಇಂದು ದೆಹಲಿಯಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ದೂರು ನೀಡಿದೆ.ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಆಧರಿಸಿ ರಾಹುಲ್‍ಗಾಂಧಿ ಇಂದು ವಿಚಾರಣೆಗೆ ಹಾಜರಾದರು.

ಕಳೆದ ವಾರ ಮಂಗಳವಾರದಿಂದ ಗುರುವಾರದವರೆಗೂ ಸತತ ಮೂರು ದಿನ, ದಿನವೊಂದಕ್ಕೆ 10 ಗಂಟೆಯಂತೆ 30 ಗಂಟೆ ರಾಹುಲ್‍ಗಾಂಧಿ ವಿಚಾರಣೆಗೆ ಒಳಗಾಗಿದ್ದರು.ಶುಕ್ರವಾರದಿಂದ ಭಾನುವಾರದವರೆಗೂ ವಿಚಾರಣೆಗೆ ಬಿಡುವು ನೀಡಲಾಗಿತ್ತು. ಇಂದು ಬೆಳಗ್ಗೆ ರಾಹುಲ್‍ಗಾಂಧಿ ಮತ್ತೆ ಹಾಜರಾಗಿದ್ದಾರೆ.

Exit mobile version