Site icon PowerTV

ಸಾರ್ವಜನಿಕ ಆಸ್ತಿ ಹಾಳು ಮಾಡಲು ಯಾರಿಗೂ ಅಧಿಕಾರ ಇಲ್ಲ : ಶೋಭಾ ಕರಂದ್ಲಾಜೆ

ಧಾರವಾಡ : ದೇಶ ವಿರೋಧ ಚಟುವಟಿಕೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನೋ ಸುದ್ದಿ ಬರುತ್ತಿದೆ ಎಂದು ಧಾರವಾಡದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಎರಡ್ಮೂರು ರಾಜ್ಯಕ್ಕೆ ಮಾತ್ರ ಕಾಂಗ್ರೆಸ್ ಸಿಮೀತವಾಗಿದೆ. ಅದಕ್ಕಾಗಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅನಾವಶ್ಯಕವಾಗಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ದೇಶ ವಿರೋಧ ಚಟುವಟಿಕೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನೋ ಸುದ್ದಿ ಬರುತ್ತಿದೆ ಎಂದರು.

ಅದಲ್ಲದೇ, ಪಾಕ್‌ಗೆ ಹೋಗಿ ಕೈ ನಾಯಕರು ಹೇಳಿಕೆ ನೀಡಿರೋದು ಇರಬಹುದು. ಚೀನಾಕ್ಕೆ ಹೋಗಿ ಅಲ್ಲಿನ ಮುಖಂಡರ ಜೊತೆಗಿನ ಮಾತುಕತೆ ಇರಬಹುದು. ಇಲ್ಲಿರುವ ದೇಶ ವಿರೋಧಿ ಸಂಘಟನೆಗಳ ಜೊತೆ ಅವರ ಸಂಪರ್ಕ ಇದೆ. ಬಿಜೆಪಿ ಸರ್ಕಾರ ಮಣಿಸುವುದಕ್ಕಾಗಿಯೇ ಇದೆಲ್ಲ ಮಾಡುತ್ತಿದ್ದಾರೆ. ಸಮಾಜ ದ್ರೋಹಿಗಳ‌ ಜೊತೆ ಕೈ ಜೋಡಿಸುತ್ತಿದ್ದಾರೆ. ದೇಶಾದ್ಯಂತ ಈಗ ಗಲಭೆ ಶುರುವಾಗಿದೆ. ಇದೆಲ್ಲದರ ಹಿಂದೆ ಷಡ್ಯಂತ್ರ ಇದೆ. ಈ ಷಡ್ಯಂತ್ರದ ಹಿಂದೆ ದೊಡ್ಡ ಕೈವಾಡ ಇದೆ ಎಂದು ಹೇಳಿದರು.

ಇನ್ನು, ಸಾರ್ವಜನಿಕ ಆಸ್ತಿ ಹಾಳು ಮಾಡಲು ಯಾರಿಗೂ ಅಧಿಕಾರ ಇಲ್ಲ. ವಿರೋಧ ಪಕ್ಷಗಳು ವಿರೋಧ ಪಕ್ಷದ ಕೆಲಸ ಮಾಡಲು ಅವಕಾಶವಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅವಕಾಶವಿದೆ. ಅದನ್ನು ಬಿಟ್ಟು ಕಾನೂನು ಕೈ ತಗೊಂಡ್ರೆ ಅದೇ ಕಾನೂನು ದಂಡಿಸುತ್ತೆ. ಗಲಭೆಗಳ ಹಿಂದೆ ಬಿಜೆಪಿ ಕೈವಾಡ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಆ ಆರೋಪಕ್ಕೆ ಉತ್ತರಿಸೋ ಅಗತ್ಯವಿಲ್ಲ. ಅಸ್ತಿತ್ವ ಕಳೆದುಕೊಂಡ ಪಕ್ಷಗಳು ಈ ಆರೋಪ ಮಾಡುತ್ತಿವೆ ಎಂದರು.

Exit mobile version