Site icon PowerTV

ನಾಳೆ ರಾಜ್ಯಕ್ಕೆ‌ ಪ್ರಧಾನಿ ಮೋದಿ‌ ಭೇಟಿ

ಬೆಂಗಳೂರು: ನಾಳೆ ರಾಜ್ಯಕ್ಕೆ‌ಪ್ರಧಾನಿ ಮೋದಿ‌ಭೇಟಿ ನೀಡುವ ಹಿನ್ನಲೆಯಲ್ಲಿ ಸಿಲಿಕಾನ್​ ಸಿಟಿಯಲ್ಲಿ ಸಕಲ ಸಿದ್ದತೆಯನ್ನು ಮಾಡಲಾಗಿದೆ.

ಬೆ.೧೧.೫೫ ಕ್ಕೆ ಯಲಹಂಕ ವಾಯುನೆಲೆಗೆ ಆಗಮಿಸುತ್ತಿದ್ದು, ಬಳಿಕ ಇಂಡಿಯನ್ ಇನ್ಸಿಟಿಟ್ಯೂಟ್ ಗೆ ಭೇಟಿ ನೀಡಿ ಅಲ್ಲಿನ ಬ್ರೈನ್ ರಿಸರ್ಚ್ ಸೆಂಟರ್ ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಅಂಬೇಡ್ಕರ್ ಸ್ಕೂಲ್‌ಆಫ್ ಎಕನಾಮಿಕ್ಸ್ ಗೆ ಭೇಟಿ ನೀಡಿದ ಬಳಿಕ ಕೆಂಗೇರಿಯ ಕೊಮ್ಮಘಟ್ಟಕ್ಕೆ‌ ಭೇಟಿ ನೀಡಲಿದ್ದಾರೆ.

ಇನ್ನು, ರಾಜ್ಯ ಬಿಜೆಪಿಯಿಂದ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಸಮಾರಂಭದಲ್ಲಿ ಭಾಗಿಯಾಗಲಿರುವ ಪ್ರಧಾನಿ ಬಳಿಕ ಮೈಸೂರಿಗೆ ಭೇಟಿ ನೀಡಲಿದ್ದಾರೆ. ರಾತ್ರಿ‌ಸುತ್ತೂರು ಮಠಕ್ಕೆ‌ ಭೇಟಿ ನೀಡಲಿದ್ದು, ಬಳಿಕ ಚಾಮುಂಡಿ‌ಬೆಟ್ಟಕ್ಕೆ‌ ಭೇಟಿ, ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಿದ್ದಾರೆ. ರಾತ್ರಿ ರ್ಯಾಡಿಸನ್ ಬ್ಲ್ಯೂ‌ಹೊಟೇಲ್​ನಲ್ಲಿ ವಾಸ್ತವ್ಯ ಹೂಡಲಿದ್ದು, ನಾಡಿದ್ದು ವಿಶ್ವಯೋಗದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಯೋಗಾ ಕಾರ್ಯಕ್ರಮದ ಬಳಿಕ‌ ದೆಹಲಿಗೆ ಹಿಂದಿರುಗಲಿದ್ದಾರೆ.

Exit mobile version