Site icon PowerTV

ಕೊಚ್ಚಿ ಹೋಗಿದ್ದ ಮಿಥುನ್ ಮೃತದೇಹ ಪತ್ತೆ

ಬೆಂಗಳೂರು: ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಬೆಂಗಳೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಿಥುನ್ ಮೃತದೇಹ ಪತ್ತೆಯಾಗಿದೆ.

ಮಿಥುನ್ ಕೆ.ಆರ್.ಪುರಂ ವಲಯದ BBMPಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ. ಗಾಯತ್ರಿ ಬಡಾವಣೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ಬೈಕ್ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ.

ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾಗ ನೀರಿನ ಜೊತೆ ಕೊಚ್ಚಿಹೋಗಿದ್ದರು..ನಿನ್ನೆ ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳ ಮತ್ತು NDRF ಸಿಬ್ಬಂದಿ ಎರಡು ಪ್ರತ್ಯೇಕ ತಂಡಗಳಾಗಿ ಎರಡು ಕಿಲೋ ಮೀಟರ್‌ವರೆಗೂ ರಾಜಕಾಲುವೆಯಲ್ಲಿ ಮಿಥುನ್‌ಗಾಗಿ ಹುಡುಕಾಟ ನಡೆಸಿದ್ದರು. ಇಂದು ಬೆಳಗ್ಗೆ ಮತ್ತೆ NDRF & SDRF ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದಾಗ ಮಿಥುನ್ ಮೃತದೇಹ ಪತ್ತೆಯಾಗಿದೆ.

Exit mobile version