Site icon PowerTV

ಹಾವೇರಿಯಲ್ಲಿ ಕೊಬ್ಬರಿ ಹೋರಿ ಹಬ್ಬದ ಸಂಭ್ರಮ

ಹಾವೇರಿ : ಬಣ್ಣ, ಬಣ್ಣದ ಚಿತ್ತಾರ ಮಾಡಿ, ಬಲೂನ್​​ಗಳಲ್ಲಿ ಕಟ್ಟಿ ಅಲಂಕಾರ ಮಾಡಿರೋ ಹೋರಿ. ಯಾರ ಕೈಗೂ ಸಿಗದಂತೆ ಶರವೇಗದಲ್ಲಿ ನುಗ್ಗುತ್ತಿರುವ ಹೋರಿ. ಹೋರಿಯನ್ನು ಅಲಂಕಾರ ಮಾಡುತ್ತಿರುವ ಅಭಿಮಾನಿಗಳು. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ಹಾವೇರಿಯ ರಾಣೆಬೆನ್ನೂರು ನಗರದ ಕುರುಬಗೇರಿಯಲ್ಲಿ ನಡೆಯುತ್ತಿರೋ ಕೊಬ್ಬರಿ ಹೋರಿ ಹಬ್ಬದಲ್ಲಿ.

ಪ್ರಕಾಶ ಬುರಡೀಕಟ್ಟಿ ಎಂಬುವರಿಗೆ ಸೇರಿದ್ದ ಹೋರಿ ಇದಾಗಿದ್ದು, ಬರೋಬ್ಬರಿ 9 ಲಕ್ಷ ರೂಪಾಯಿ ಕೊಟ್ಟು ತಮಿಳುನಾಡಿನಿಂದ ಕೊಬ್ಬರಿ ಹೋರಿ ಹಬ್ಬದಲ್ಲಿ ಓಡಿಸೋಕೆ ಎಂದು ತರಲಾಗಿದೆ. ಇನ್ನು ವಿಶೇಷ ಅಂದ್ರೆ ರಾಣೆಬೆನ್ನೂರು ಕಾ ರಾಜಾ ಅನ್ನೋ ಹೋರಿ ಹಬ್ಬದಲ್ಲಿ ಓಡಿಸುವ ಹೋರಿ ಇತ್ತೀಚೆಗೆ ಹತ್ಯೆಯಾದ ಹರ್ಷನ ನೆನಪಿನಲ್ಲಿ ಅಖಾಡದಲ್ಲಿ ಧೂಳೆಬ್ಬಿಸ್ತಿದೆ.

ಹಿಂದೂ ಹುಲಿ ಹರ್ಷ ಸವಿನೆನಪಿನ ಹೋರಿ ಅಂತಲೆ ಓಡಿ ಚಿನ್ನದುಂಗರಗಳು, ಬೈಕ್ ಮತ್ತು ಚಿನ್ನದ ಆಭರಣಗಳನ್ನು ಬಹುಮಾನದ ರೂಪದಲ್ಲಿ ಬಾಚಿಕೊಂಡಿದೆ. ಕೊಬ್ಬರಿ ಹೋರಿ ಹಬ್ಬದ ಈ ಹೋರಿ ಹಾವೇರಿ, ಹಾನಗಲ್, ಶಿವಮೊಗ್ಗ, ಕೃಷ್ಣಾಪುರ ಸೇರಿ 9 ಅಖಾಡಗಳಲ್ಲಿ ಮಿಂಚಿನ ಓಟ‌ ಓಡಿ ತನ್ನದೇಯಾದ ಹೆಸರು ಮಾಡಿದೆ. ಹೋರಿಗೆ ಅನೇಕ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಹೋರಿ ಹಬ್ಬದಲ್ಲಿ ಸಖತ್ ಫೇಮಸ್ ಆಗಿದೆ.
ಒಟ್ಟಿನಲ್ಲಿ ಈಗ ಹರ್ಷ ಸವಿನೆನಪಿನಲ್ಲಿರುವ ರಾಣೇಬೆನ್ನೂರು ಕಾ ರಾಜಾ ಅನ್ನೋ ಹೆಸರಿನ ಹೋರಿ ಹಬ್ಬದ ಅಖಾಡದಲ್ಲಿ ಓಡಿ ಭರ್ಜರಿ ಹೆಸರು ಮಾಡುತ್ತಿದೆ.
ವೀರೇಶ ಬಾರ್ಕಿ,ಪವರ್ ಟಿವಿ ಹಾವೇರಿ.

Exit mobile version