Site icon PowerTV

ಸೋಷಿಯಲ್ ಮೀಡಿಯಾದಲ್ಲಿ ಶುರುವಾಯ್ತು ತೊಲಗು ಮೋದಿ ಕ್ಯಾಂಪೇನ್

ಮಂಡ್ಯ: ಪ್ರಧಾನಿಯ ಗ್ರ್ಯಾಂಡ್ ವೆಲ್ ಕಮ್​​ಗೆ ಒಂದೆಡೆ ಸಿದ್ಧತೆ ನಡೆಯುತ್ತಿದ್ದು, ಮತ್ತೊಂದೆಡೆ ತೊಲಗು ಮೋದಿ ಅಭಿಯಾನ ನಡೆಯುತ್ತಿದೆ.

ರಾಜ್ಯದಲ್ಲಿ ತೊಲಗು ಮೋದಿ ಅಭಿಯಾನ ಶುರುವಾಗಿದ್ದು, ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ನಾವು ದ್ರಾವಿಡ ಕನ್ನಡಿಗರು ಸಂಘಟನೆಯಿಂದ ಮೋದಿ ತೊಲಗು ಅಭಿಯಾನ ಶುರುವಾಗಿದೆ. RSS ಹೆಗ್ಡೇವರ್ಕರ್ ಸತ್ತ ದಿನ ನೆನೆಯಲು, ಯೋಗ ಹೆಸರಲ್ಲಿ ಜನಸಾಮಾನ್ಯರ ಯಾಮಾರಿಸಲು ಬರುತ್ತಿದ್ದಾರೆಂದು ಮಂಡ್ಯ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅದಲ್ಲದೇ, ಚಾಮುಂಡಿ ಬೆಟ್ಟಕ್ಕೆ ದ್ರಾವಿಡ ಮುಂದಾಳು ಮಹಿಷಾ ಶೂರರಿಗೆ ಅವಮಾನ ಮಾಡಲು ಬರುತ್ತಿರುವ ಅವರು ಮೈಸೂರಲ್ಲಿ ಕುತಂತ್ರ ಸಂಸ್ಕೃತ ವೇದ ಪಾಠ ಶಾಲೆ ತೆರೆಯಲು ಬರುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಬೇರೆ ಬೇರೆಯವರು ಮಾಡಿರುವ ಯೋಜನೆಗಳ ಟೇಪ್ ಕಟ್ ಮಾಡಿ ಬಿಲ್ಡಪ್ ತೆಗೆದುಕೊಳ್ಳಲು ಬರುತ್ತಿರುವ ಮೋದಿ ಅಂತೆಲ್ಲ ಪೋಸ್ಟ್ ತೊಲಗು ಮೋದಿ, Getlostmodi ಅಂತೆಲ್ಲ ಕ್ಯಾಂಪೇನ್ ನಡೆಯುತ್ತಿದೆ.

Exit mobile version