Site icon PowerTV

ಬೆಂಗಳೂರಿನ ಮಳೆ ಅವಾಂತರಗಳಿಗೆ ಹೊಣೆ ಯಾರು..?

ಬೆಂಗಳೂರು: ಸಿಲಿಕಾನ್​ ಸಿಟಿ ಮಳೆ ಅವಾಂತರಗಳಿಗೆ ಯಾರು ಹೊಣೆ ಮಳೆಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು..? ಪ್ರತಿ ಬಾರಿ ಮಳೆಯಾದಾಗಲೂ ಸಾವು ನೋವು ಸಂಕಷ್ಟದಿಂದ ಜನರು ತತ್ತರಿಸಿ ಹೋಗಿದ್ದಾರೆ.

ನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೇ ಏನ್ ಮಾಡ್ತಿದ್ದೀರಾ..? BBMP ಎಲೆಕ್ಷನ್​ಗಿರೋ ಜೋಶ್​ ಮಳೆ ಹಾನಿ ಪರಿಹಾರಕ್ಕೆ ಯಾಕಿಲ್ಲ..? ಅಧಿಕಾರ.. ಅಧಿಕಾರ ಅನ್ನೋ ನೀವು ಜನರ ಅಹವಾಲು ಯಾಕೆ ಕೇಳಲ್ಲ..? ಪ್ರತಿ ಬಾರಿ ಮಳೆಯಾದಾಗಲೂ ಸಾವು-ನೋವು ಸಂಕಷ್ಟ ಸಂಭವಿಸುತ್ತಿದೆ.

ಅದಲ್ಲದೇ, ಆರು ಮಂತ್ರಿಗಳು 28 ಶಾಸಕರಿದ್ದು ಏನ್​ ಪ್ರಯೋಜನ..? ಸಾವಿನ ಮನೆಯಲ್ಲಿ ನಿಮ್ಮ ಮೊಸಳೆ ಕಣ್ಣೀರು ಬೇಡ..! ಬೆಂಗಳೂರಿಗೆ ಶಾಶ್ವತ ಪರಿಹಾರ ಕೊಡಿ. ತಗ್ಗು ಪ್ರದೇಶದ ಜನರಿಗೆ ಮಳೆ ಹಾನಿಯಿಂದ ಮುಕ್ತಿ ಕೊಡಿ. ಜನತೆ ಕೊಟ್ಟ ಅಧಿಕಾರ ಜನಸೇವೆಗಾಗಿ ಬಳಸಿ. ಬೆಂಗಳೂರು ಉಸ್ತುವಾರಿ ಹೊತ್ತ ಮುಖ್ಯಮಂತ್ರಿಗಳೇ ಎಚ್ಚೆತ್ತುಕೊಳ್ಳಿ. ನಿಮ್ಮ ಸಿಟಿ ರೌಂಡ್ಸ್ ಕಾರ್ಯಕ್ರಮದ ಉಪಯೋಗವೇನು..? BBMP ಅಧಿಕಾರಿಗಳಿಗೆ ಕಿವಿ ಹಿಂಡಿ ಕೆಲಸ ಮಾಡಿಸಲು ಹಿಂದೇಟ್ಯಾಕೆ..? ಜಾಗತಿಕ ನಗರಿ ಸಿಲಿಕಾನ್​ ಸಿಟಿಯನ್ನ ‘ಫ್ಲಡ್​ ಸಿಟಿ’ ಮಾಡಬೇಡಿ.

Exit mobile version