Site icon PowerTV

ನಟಿಯ ಪಾಲಿಗೆ ವಿಲನ್ ಆದ ದಂತ ವೈದ್ಯೆ

ಸ್ಯಾಂಡಲ್‌ವುಡ್ ನಟಿ ಚೇತನಾ ರಾಜ್ ತೂಕ ಕಳೆದುಕೊಳ್ಳುವ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಪ್ರಾಣವನ್ನೇ ಬಿಟ್ಟ ಘಟನೆ ಇನ್ನೂ ಹಸಿರಾಗಿರುವಾಗ ಮತ್ತೊಬ್ಬ ನಟಿಯೊಬ್ಬರು ವೈದ್ಯೆಯೊಬ್ಬರ ದೆಸೆಯಿಂದ ಮುಖದ ಅಂದ ಹಾಳು ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

FIR, ‘6 ಟು 6’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಸ್ವಾತಿ ಸತೀಶ್ ಹಲ್ಲಿನ ಚಿಕಿತ್ಸೆಗೆಂದು ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ರು.ರೂಟ್ ಕೆನಲ್‌ ಸ್ಪೆಷಲಿಸ್ಟ್ ಎಂದು ದಂತ ವೈದ್ಯೆಯೊಬ್ಬರ ಬಳಿ ಚಿಕಿತ್ಸೆ ಮಾಡಿಸಿದ್ದರು.

ಅದಲ್ಲದೇ, ಚಿಕಿತ್ಸೆ ಮುಗಿದ ಬಳಿಕ ಅವರ ದವಡೆ ಊದಿಕೊಂಡಿತ್ತು. ಇನ್ನೆರಡು ದಿನದಲ್ಲಿ ಊತ ಕಡಿಮೆ ಆಗುತ್ತದೆ ಎಂದು ವೈದ್ಯರು ಹೇಳಿದ್ದರು ಆದರೆ ಚಿಕಿತ್ಸೆ ಪಡೆದು 20 ದಿನವಾದರೂ ಇನ್ನೂ ಊತ ಕಡಿಮೆ ಆಗಿಲ್ಲ. ತರ ಪ್ರಶ್ನೆ ಮಾಡಿದರೆ ಈಗ ಓರಿಕ್ಸ್‌ ಡೆಂಟಲ್‌ ವೈದ್ಯೆ ತಪ್ಪಿನಿಂದ ಜಾರಿಕೊಳ್ಳುತ್ತಿದ್ದಾರೆ. ಇದರಲ್ಲಿ ನಮ್ಮ ತಪ್ಪೇನು ಇಲ್ಲ, ನಿಮ್ಮ ತ್ವಚೆಯೇ ಬಹಳ ಸೂಕ್ಷ್ಮವಾಗಿದೆ ಎಂದು ಹೇಳುತ್ತಿದ್ದಾರೆ. ರೋಗಿಗಳಿಗೆ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪರವಾನಗಿ ರದ್ದು ಮಾಡಬೇಕು, ಆಸ್ಪತ್ರೆಗಳನ್ನು ಬೀಗ ಹಾಕಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version