Site icon PowerTV

ಕೋಡಿಹಳ್ಳಿ ಚಂದ್ರಶೇಖರ ವಿರುದ್ದ ಸಿಡಿದೆದ್ದ ರೈತ ಸಂಘದ ಸದಸ್ಯರು

ವಿಜಯಪುರ : ಕೋಡಿಹಳ್ಳಿ ಚಂದ್ರಶೇಖರ ಬಂದರೆ ಕಪ್ಪು ಭಾವುಟ ಪ್ರದರ್ಶನದ ಜೊತೆಗೆ ಮಸಿ ಬಳೆಯುವದು ಗ್ಯಾರಂಟಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಕೋಡಿಹಳ್ಳಿ ವಿರುದ್ದ ಚುನ್ನಪ್ಪ ಪೂಜಾರಿ ಬಣದ ರೈತ ಸಂಘದ ಸದಸ್ಯರಿಂದ ನಗರದಲ್ಲಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂನ್ 20 ರಂದು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಕೋಡಿಹಳ್ಳಿ ಚಂದ್ರಶೇಖರ ಕೋಡಿಹಳ್ಳಿ ಚಂದ್ರಶೇಖರ ಬಂದರೆ ಕಪ್ಪು ಭಾವುಟ ಪ್ರದರ್ಶನದ ಜೊತೆಗೆ ಮಸಿ ಬಳೆಯುವದು ಗ್ಯಾರಂಟಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದಲ್ಲದೇ, ಕೋಡಿಹಳ್ಳಿಗೆ ಮಸಿ ಬಳಿಯುವದು ಹೇಗೆ..? ಅಂದು ಹೋರಾಟ ಹೇಗಿರಬೇಕು. ಎಂದು ನಗರದಲ್ಲಿ ಸಭೆ ನಡೆಸಿದ ರೈತ ಸಂಘದ ಸದಸ್ಯರು. ಸಭೆ ಬಳಿಕ ಅಂತಿಮ‌ ತೀರ್ಮಾನ ಮಾಡಿ ಮಸಿ ಬಳೆಯವದು ಹೇಗೆ…? ಎಲ್ಲಿ…? ಹಾಗೂ ಕಪ್ಪು ಬಟ್ಟೆ ಪ್ರದರ್ಶನದ ಕುರಿತು ಸಭೆಯಲ್ಲಿ ತೀರ್ಮಾನಿಸಿದ ರೈತ ಸಂಘಟನೆ ಮುಖಂಡರು. ತಮ್ಮ ಮೇಲಿನ ಆರೋಪ ಮುಕ್ತರಾಗುವ ವರೆಗೂ ಜಿಲ್ಲೆಗೆ ಆಗಮಿಸಬಾರದು ಎಂದು ರೈತ ಸಂಘದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

Exit mobile version