Site icon PowerTV

ಜನರ ಗಮನ ಸೆಳೆಯೋ ಅತ್ತ ಕಾಂಗ್ರೆಸ್​​ ಡ್ರಾಮ : ಸಚಿವ ಹಾಲಪ್ಪ ಆಚಾರ್

ಚಾಮರಾಜನಗರ: ಕಾಂಗ್ರೆಸ್​​ನವರು ಮಾಡುತ್ತಿರುವ ಹೋರಾಟ ರಾಜಕೀಯ ದೊಂಬರಾಟವಾಗಿದೆ ಎಂದು ಚಾಮರಾಜನಗರದಲ್ಲಿ ಗಣಿ ಸಚಿವ ಹಾಲಪ್ಪ ಆಚಾರ್​​ ಅವರು ಕಾಂಗ್ರೆಸ್​​ ವಿರುದ್ದ ಕಿಡಿಕಾಡಿದರು.

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಅವರು, ED ತನಿಖೆ ಮಾಡುತ್ತಿರುವ ಆ ಸಂಸ್ಥೆಯ ಸ್ವಾತಂತ್ರ್ಯವಾಗಿದೆ. ಈ ವಿರೋಧ ಪಕ್ಷದ ಕಾಂಗ್ರಸ್​​ನವರು ಮಾಡುತ್ತಿರುವ ಹೋರಾಟ ರಾಜಕೀಯ ದೊಂಬರಾಟವಾಗಿದೆ. ಉರುಳಿಲ್ಲದ ಹೋರಾಟ ಇದು, ಸಂವಿಧಾನದ ಮೇಲೆ ನಂಬಿಕೆ ಇಲ್ಲ ಇವರಿಗೆ ಇದನ್ನ ಹೋರಾಟ ಎನ್ನಲು ಹೇಗೆ ಸಾಧ್ಯ, ಅವರು ರಾಜಕೀಯ ಲಾಭಕ್ಕೆ ಈ ನಾಟಕ ಆಡುತ್ತಿದ್ದಾರೆ. ಜನರ ಗಮನ ತಮ್ಮ ಕಡೆ ಸೆಳೆಯೋಕೆ ಈ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಗುಡ್ಡ ಕುಸಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಇಲಾಖೆಯಿಂದ ಸೂಕ್ತ ತನಿಖೆ ಮಾಡಿ, ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಮುಖ ಆರೋಪಿ‌ ಬಂಧನವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಇಲಾಖೆಯ ಕಡೆಯಿಂದ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಅವರನ್ನ ಪೊಲೀಸರು ಅರೆಸ್ಟ್ ಮಾಡಬೇಕು ಏಕೆ ಮಾಡಿಲ್ಲ ಅದು ನನಗೆ ಗೊತ್ತಿಲ್ಲ. ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದು ತಿಳಿಸಿದರು.

Exit mobile version