Monday, August 25, 2025
Google search engine
HomeUncategorizedಭೂಮಿಗೆ ಬಂತು ಅನ್ಯಗ್ರಹ ವಾಸಿಗಳ ಸಿಗ್ನಲ್ ..!

ಭೂಮಿಗೆ ಬಂತು ಅನ್ಯಗ್ರಹ ವಾಸಿಗಳ ಸಿಗ್ನಲ್ ..!

ಏಲಿಯನ್ಸ್ ಜಗತ್ತಿನಿಂದ ಭೂಮಿಗೆ ಸಂದೇಶ ಬಂತಾ..? ಇಂತಹದ್ದೊಂದು ಚರ್ಚೆಗೆ ಕಾರಣವಾಗಿದ್ದು ಚೀನಾ ಹೇಳಿಕೆ. ಹೌದು ಚೀನಾದ ಅತಿದೊಡ್ಡ ಟೆಲಿಸ್ಕೋಪ್ ಗೆ ಅನ್ಯ ಜೀವಿಗಳಿಂದ ಸಿಗ್ನಲ್ ಬಂದಿದೆಯಂತೆ. ಇದರಿಂದ ಏಲಿಯನ್ಸ್ ಇರುವಿಕೆ ಬಗ್ಗೆ ಪುಷ್ಠಿ ಸಿಕ್ಕಿದೆ. ಆದರೆ ಚೀನಾ ತನಗೆ ಸಿಗ್ನಲ್ ಬಂದಿದೆ ಎಂದು ಹೇಳಿ ನಂತರ ಅದನ್ನು ಡಿಲಿಟ್ ಮಾಡಿರೋದಾಗಿ ಹೇಳಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಚೀನಾ ಸ್ಕೈ ಅಯ್ ವಿಶ್ವದ ಅತಿದೊಡ್ಡ ಟೆಲಿಸ್ಕೋಪ್ ಆಗಿದ್ದು, ಅನ್ಯಗ್ರಹ ಜೀವಿಗಳಿಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ಪ್ರಯತ್ನ ಮಾಡುತ್ತದೆ. 2020 ರಲ್ಲಿ ಇದೇ ರೀತಿ ವಿಶಿಷ್ಟ ಸಿಗ್ನಲ್ ಪಡೆದಿದ್ದ Sky Eye ಟೆಲಿಸ್ಕೋಪ್ ಇದೀಗ ಮತ್ತೆ ಅಂತಹದ್ದು ಸಿಗ್ನಲ್ ಸ್ವೀಕರಿಸಿದೆ. ಈ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮುಂದುವರೆಸಿದ್ದು ಮುಂದಿನ ದಿನಗಳಲ್ಲಿ ಏಲಿಯನ್ಸ್ ಬಗ್ಗೆ ಮಹತ್ವದ ಅಂಶಗಳು ಬಯಲಿಗೆ ಬರಬಹುದು. ಒಂದೆಡೆ ನಾಸಾ ವಿಜ್ಞಾನಿಗಳು UFO ಗಳ ಬಗ್ಗೆ ಸಂಶೋಧನೆಗೆ ಇಳಿದಿರುವುದು ಹಾಗೂ ಅಮೆರಿಕಾದ ಮೃಗಾಲಯದ ಬಳಿ ಇತ್ತೀಚಿಗೆ ವಿಚಿತ್ರ ಆಕಾರ ಕಾಣಿಸಿಕೊಂಡ ಬಳಿಕ ಇದೀಗ ಚೀನಾ ಸುದ್ದಿ ಜಗತ್ತನ್ನು ಮತ್ತಷ್ಟು ಬೆರಗುಗೊಳಿಸುತ್ತಿದೆ.

RELATED ARTICLES
- Advertisment -
Google search engine

Most Popular

Recent Comments