Site icon PowerTV

ಗೊಬ್ಬರ ಕೇಳಿದ್ದಕ್ಕೆ ಕೇಂದ್ರ ಸಚಿವರಿಂದ ಧಿಮಾಕಿನ ಉತ್ತರ

ಬೀದರ್​ : ನಮ್ಮ ಊರಲ್ಲಿ ಗೊಬ್ಬರು ಸಿಗುತ್ತಿಲ್ಲ ಸರ್ ಅಂತ ರೈತನೊರ್ವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಪ್ರಶ್ನೆ ಕೇಳಿದಕ್ಕೆ ಧಿಮಾಕಿನ ಮಾತುಗಳನ್ನನಾಡಿ ಮೊಂಡುತನ ಪ್ರದರ್ಶಿಸಿದ ಪ್ರಸಂಗ ಬೀದರ್​​ನಲ್ಲಿ ನಡೆದಿದೆ.

ನಿಮಗೆ ಗೊಬ್ಬರ ಸಿಗಲಿಲ್ಲ ಅಂದ್ರೆ ನಾನೇನು ಮಾಡಲಿ ಎಂದಿದ್ದಾರೆ. ಸಾವಿರಾರು ಜನ ನೌಕರರು ಇದಾರೆ ಅವರು ನೋಡಿಕೊಳ್ಳುತ್ತಾರೆ ಹೋಗು ಅಲ್ಲಿಗೆ, ನನ್ನ ಕೆಲಸ ಗೊಬ್ಬರವನ್ನು ರಾಜ್ಯಕ್ಕೆ ಕಳಿಸೋದಿದೆ, ಕಳಿಸಿದ್ದೇನೆ ಅಷ್ಟೇ. ಅಲ್ಲಿನ ಶಾಸಕ ಇದಾನಲ್ಲ, ಜೊತೆಗೆ ಸಾವಿರಾರು ಮಂದಿ ನೌಕರರು ಇದಾರೆ. ಅವನ್ನ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ,..? ಎಂದು ಕೇಂದ್ರ ಸಚಿವ ಭಗವಂತ ಖೂಬಾ ಉಢಾಫೆ ಉತ್ತರ ನೀಡಿದ್ದಾರೆ.

ಅಲ್ಲದೆ ನೊಂದ ರೈತ ಮುಂದಿನ ಚುನಾವಣೆಯಲ್ಲಿ ನೀವು ಹೇಗೆ ಆರಿಸಿ ಬರುತ್ತಿರಿ ನೋಡಿ ಎಂದ ಕರೆ ಮಾಡಿದ್ದಕ್ಕೆ, ಚುನಾವಣೆಯಲ್ಲಿ ಹೇಗೆ ಗೆದ್ದು ಬರಬೇಕೆಂದು ನನಗೆ ಗೊತ್ತಿದೆ. ನಾನು ಭಾತರ ಸರ್ಕಾರದ ಮಂತ್ರಿಯಾಗಿದ್ದೇನೆ, ರಾಜ್ಯಗಳನ್ನ ಮಾತ್ರ ನೋಡಿಕೊಳ್ಳುತ್ತೇನೆ. ನೀನು ಏನ್ ಮಾಡಿಕೊಳ್ಳುತ್ತಿಯಾ ಮಾಡಿಕೊ ಹೋಗು ಎಂದು ಕ್ಷೇತ್ರದ ಜನರಿಗೆ ಉಡಾಫೆ ಉತ್ತರ ನೀಡಿ ಬೆದರಿಕೆವೊಡ್ಡಿದ್ದಾರೆ.

Exit mobile version