Site icon PowerTV

ಶಾಸಕ ಶ್ರೀನಿವಾಸ್​​ಗೆ ಬಾಯಿಗೆ ಬಂದಂತೆ ಬೈದ ಹೆಚ್ಡಿಕೆ ಅಭಿಮಾನಿ

ಮಂಡ್ಯ: ಜೆಡಿಎಸ್​ ​ಶಾಸಕ ಎಸ್​ ಆರ್ ಶ್ರೀನಿವಾಸ್ ಅಡ್ಡ ಮತದಾನ ಮಾಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಶಾಸಕರ ಮಧ್ಯೆ ಟಾಕ್​​​​ವಾರ್ ಜೋರಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಶ್ರೀನಿವಾಸ್ ವಿರುದ್ದ ಮಂಡ್ಯದ ಜೆಡಿಎಸ್ ಕಾರ್ಯಕರ್ತನೊಬ್ಬ ಅಣ್ಣನ ಬಗ್ಗೆ ಮಾತಾಡ್ತೀಯಾ‌‌ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರುನಾಡ ಕರ್ಣ ಕುಮಾರಣ್ಣನಿಗೆ 6 ಕೋಟಿ ಕನ್ನಡಿಗರ ಆಶೀರ್ವಾದ ಇದೆ. ಕುಮಾರಣ್ಣ ನಮ್ಮ ರೈತರ ಸಾಲಮನ್ನಾ ಮಾಡ್ದಾ. ನೀನು ನಮ್ಮ ಕುಮಾರಣ್ಣನ ಬಗ್ಗೆ ಮಾತಾಡ್ತೀಯಾ. ನನ್ನ ಕ್ಷೇತ್ರದಲ್ಲಿ ನೀನು ಶಾಸಕನಾಗಿದ್ರೆ ತುಂಡು ತುಂಡಾಗಿ ಕತ್ತರಿಸಿ ಹಾಕ್ತಿದ್ದೆ ಎಂದು ಹೆಚ್​ಡಿಕೆ ಅಭಿಮಾನಿ ಬಾಯಿಗೆ ಬಂದಂತೆ ಬೈದು ಅವಾಜ್ ಹಾಕಿದ್ದಾರೆ.

ರಾಜ್ಯದಲ್ಲಿ 224 ಕ್ಷೇತ್ರದ ಪೈಕಿ ಯಾವುದೇ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ತಾಕತ್ತಿದೆ. ಜೆಡಿಎಸ್ ಪಕ್ಷದಲ್ಲಿ ತಿಂದು, ಉಂಡು, ಅವರ ಬಗ್ಗೇನೆ ಮಾತಾಡ್ತೀಯಲ್ಲೋ ಎಂದು ಕುಮಾರಣ್ಣನಿಗೆ ಜೈ ಎನ್ನಲು ಹೋಗಿ ಜೆಡಿಎಸ್ ಕಾರ್ಯಕರ್ತ ನಾಲಿಗೆ ಹರಿಬಿಟ್ಟಿದ್ದಾರೆ. ಸದ್ಯ ಕಾರ್ಯಕರ್ತ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Exit mobile version