Site icon PowerTV

ಉದ್ದೇಶ ಪೂರ್ವಕವಾಗಿ ಮೈನಾರಿಟಿಯವರನ್ನ ಟಾರ್ಗೆಟ್ ಮಾಡ್ತಿದ್ದಾರೆ : ಡಿಕೆ ಶಿವಕುಮಾರ್​

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಮಾಡಿದರು ಅಂತ ಇಲ್ಲಿ ಮಾಡಲು ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಂದು ತೀರ್ಥಹಳ್ಳಿ ಹೋಗಬೇಕಿತ್ತು‌. ಆದರೆ ಕೋರ್ಟ್ ಗೆ ಹಾಜರಾಗಬೇಕಿದೆ. ಬೆಳಿಗ್ಗೆ ೮-೩೦ ಕ್ಕೆ ಪ್ರವಾಸ ರದ್ದು ಮಾಡಿದೆ. ೨-೩ ಕೇಸುಗಳಿವೆ, ಕೋರ್ಟ್ ಅಟೆಂಡ್ ಮಾಡಬೇಕು‌. ನಮ್ಮ ಕ್ಷೇತ್ರದಲ್ಲಿ ತುಂಬ ಬೇಕಾದವರು ಹಿರಿಯರು ಒಬ್ಬರು ತೀರಿಕೊಂಡಿದ್ದಾರೆ ಅಲ್ಲಿಗೆ ಹೋಗಬೇಕು‌ ಎಂದರು.

ಅದಲ್ಲದೇ, ಯಾಕೆ ಈ ರೀತಿ ಕಿರುಕುಳ ಕೊಡ್ತಿದ್ದಾರೋ ನಮ್ಮ ನಾಯಕರುಗಳಿಗೆ ಗೊತ್ತಿಲ್ಲ. ಬೇರೆ ಬೇರೆ ವಿಚಾರ ಚರ್ಚೆ ಮಾಡುವುದು ಇದೆ ಆದ್ದರಿಂದ ಹೋಗಲಿಲ್ಲ. ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಕ್ರಮಕ್ಕೆ ಮುಂದಾಗ್ತಾರಾ. ನಾವು ಹೋಗಿ ಅಲ್ಲೆ ಮಲಗುತ್ತೇವೆ. ಉತ್ತರ ಪ್ರದೇಶದಲ್ಲಿ ಮಾಡಿದರು ಅಂತ ಇಲ್ಲಿ ಮಾಡಲು ಆಗಲ್ಲ. ಕರ್ನಾಟಕದಲ್ಲಿ ಕಾನೂನು ಇದೆ. ಇವರು ಉದ್ದೇಶ ಪೂರ್ವಕವಾಗಿ ಮೈನಾರಿಟಿಯವರನ್ನ ಟಾರ್ಗೆಟ್ ಮಾಡ್ತಿದ್ದಾರೆ. ಹೆದರಿಸಬೇಕು, ಬೆದರಿಸಬೇಕು ಅಂತ ಸುಮ್ಮನೆ ಕಿರುಕುಳ ಕೊಡ್ತಿದಾರೆ ಎಲ್ಲಾ ಜಾತಿ ಮೇಲೆ ಮಾಡೋಕೆ ಹೊರಟಿದ್ದಾರೆ ಎಂದು ಹೇಳಿದರು.

Exit mobile version