Site icon PowerTV

ಗೋಮಾಂಸ ಅಡ್ಡೆಗಳ ಮೇಲೆ ಬುಲ್ಡೋಜರ್​ ಪ್ರಯೋಗ

ಚಿಕ್ಕಮಗಳೂರು: ಉತ್ತರ ಪ್ರದೇಶ ಸರ್ಕಾರ ಕಾನೂನು ಉಲ್ಲಂಘಿಸಿದವರ ಮನೆಗೆ ಬುಲ್ಡೋಜರ್​ ನುಗ್ಗಿಸುವುದರ ಮುಖಾಂತರ ಎಲ್ಲೆಡೆ ಸದ್ದು ಮಾಡುತ್ತಿದೆ.. ಈಗ ಕಾಫಿನಾಡು ರಾಜ್ಯದಲ್ಲಿ ಯುಪಿ ಮಾದರಿ ಬುಲ್ಡೋಜರ್ ಪ್ರಯೋಗ ಪ್ರಯೋಗ ಮಾಡಲು ಮುಂದಾಗಿದೆ.

ಸಿ.ಟಿ ರವಿ ಕ್ಷೇತ್ರವಾದ ಚಿಕ್ಕಮಗಳೂರಿನಲ್ಲಿ ಗೋಹತ್ಯೆ ಎಲ್ಲೆಡೆ ನಡೆಯುತ್ತಿದೆ, ಇದಕ್ಕೆ ಬ್ರೇಕ್​ ಹಾಕಲು ನಗರಸಭೆ ಮುಂದಾಗಿದ್ದು ಅಕ್ರಮ ಗೋಮಾಂಸ ಅಡ್ಡೆ & ಗೋಮಾಂಸ ಮಾರಾಟ ಮಾಡುವ ಮನೆಗಳಿಗೆ ನೋಟಿಸ್ ನೋಟಿಸ್​ ನೀಡಲಾಗಿದೆ. ಜೊತೆಗೆ ಸ್ಫೋಟಕ, ಮಾದಕ ವಸ್ತು ಸೇರಿ ಗೋಹತ್ಯೆ ಮಾಡಿದ್ರೆ ಕಟ್ಟಡ ನೆಲಸಮ ಮಾಡುವುದಾಗಿ ನಿರ್ದಾಕ್ಷಣ್ಯ ಕ್ರಮದ ಬಗ್ಗೆ ನಗರಸಭೆ ಎಚ್ಚರಿಕೆ ನೀಡಿದೆ.

ಈಗಾಗಲೇ 10ಕ್ಕೂ ಹೆಚ್ಚು ಮನೆ, ಗೋಮಾಂಸ ಅಡ್ಡೆಗಳಿಗೆ ನೋಟಿಸ್ ನೀಡಿದ್ದು, ಕಳೆದ ವಾರ ಗೋಮಾಂಸ ಅಡ್ಡೆಯನ್ನ ಜೆಸಿಬಿ ಮೂಲಕ ನೆಲಸಮ ಮಾಡಿದೆ.

Exit mobile version