Site icon PowerTV

ಡಿ.ಕೆ ಶಿವಕುಮಾರ್​ ಹೇಳಿಕೆ ಸಿ.ಟಿ ರವಿ ತಿರುಗೇಟು

ಚಿಕ್ಕಮಗಳೂರು: ಕಾಂಗ್ರೆಸ್ ನೀತಿ ಭ್ರಷ್ಟಾಚಾರಿಗಳ, ಮತಾಂತರಿಗಳ ಪರವಾಗಿ ನಿಲ್ಲುವುದು. ಅಕ್ರಮ ಗೋಹತ್ಯೆ ಮಾಡುವವರ ಪರ ನಿಲ್ಲುವುದು ಇದೇ ನಮ್ಮ ನೀತಿ ಅನ್ನೋದನ್ನ ಕಾಂಗ್ರೆಸ್ ಸಾಬೀತುಪಡಿಸಲಿ ಎಂದು ಸಿ.ಟಿ ರವಿ ಅವರು ಕಾಂಗ್ರೆಸ್​​ಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬುಲ್ಡೋಜರ್ ಎದುರುಗಡೆ ಬಂದು ಡಿ.ಕೆ. ಶಿವಕುಮಾರ್​ ನಿಂತುಕೊಳ್ಳಲಿ. ಯುಪಿಯಲ್ಲಿ ಹೇಗೆ ಡಿಪಾಸಿಟ್ ಕಳೆದುಕೊಂಡ್ರೋ ಇಲ್ಲಿಯೂ ಹಾಗೇ ಆಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿಕೆಗೆ ಟಾಂಗ್​ ಕೊಟ್ಟಿದ್ದಾರೆ.

ಇನ್ನು ಇದೇ ವೇಳೆ ಗೋಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇವತ್ತಿನ ಕಾಂಗ್ರೆಸ್ ಅಕ್ರಮ ಗೋಹತ್ಯೆ ಪರವಾಗಿದೆ. ಅಕ್ರಮ ಗೋಹತ್ಯೆಯನ್ನ ಸಮರ್ಥನೆ ಮಾಡಿಕೊಳ್ಳಲಿ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ ಎಂದು ಬಿಜೆಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಹೇಳಿದರು.

Exit mobile version