Site icon PowerTV

ಕಾರಹುಣ್ಣಿಮೆಯಲ್ಲಿ ರಾರಾಜಿಸಿದ ಅಪ್ಪು

ವಿಜಯಪುರ : ಉತ್ತರ ಕನಾ೯ಟಕದ ಕಾರ ಹುಣ್ಣಿಮೆ ಎತ್ತುಗಳ ಕರಿ ಹರಿಯುವ ಹಬ್ಬಕ್ಕೂ ಬಂತು ಅಪ್ಪು ಎಫೆಕ್ಟ್‌ ಅನ್ನದಾತನ ಎತ್ತುಗಳ ಸಿಂಗರಿಸೋ ವೇಳೆ ಯುವ ಕಲಾವಿದ ಅಪ್ಪು ಚಿತ್ರ ಬಿಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕರಡಿ ಗ್ರಾಮದಲ್ಲಿ ನಡೆದ ಎತ್ತುಗಳಿಂದ ಕರಿ ಹರಿಯುವ ಹಬ್ಬವಾಗಿದ್ದು, ಪ್ರತಿವರ್ಷ ಕಾರ ಹುಣ್ಣಿಮೆ ನಿಮಿತ್ಯ ಎತ್ತುಗಳನ್ನ ಅಲಂಕರಿಸಿ ಸ್ಫರ್ಧೆಗೆ ಗ್ರಾಮಸ್ಥರು ಬಿಡುತ್ತಾರೆ. ಈ ಬಾರಿ ಎತ್ತುಗಳ ಮೈಮೇಲೆ ಪುನೀತ ರಾಜಕುಮಾರ್ ಭಾವಚಿತ್ರ ಕಂಗೊಳಿಸಿದೆ.

ಪೋಚಾಪೂರ ಗ್ರಾಮದ ಕಾಲೇಜ್ ವಿದ್ಯಾರ್ಥಿಯಿಂದ ಅಪ್ಪು ಚಿತ್ರ ಬಿಡಿಸಿದ್ದು, ಗುರಿಕಾರ ಎಂಬುವವರಿಗೆ ಸೇರಿದ ಎತ್ತಿನ ಮೈಮೇಲೆ ಭೀಮಣ್ಣ ಉಪ್ಪೇರಿ ಅಪ್ಪು ಭಾವಚಿತ್ರ ಬಿಡಿಸಿದ್ದಾನೆ. ಇದರ ಜೊತೆಗೆ ಸಂಗೊಳ್ಳಿ ರಾಯಣ್ಣನ ಚಿತ್ರವನ್ನೂ ಸಹ ಬಿಡಿಸಿದ್ದಾನೆ. ಎತ್ತುಗಳ ಸ್ಪರ್ಧೆಯಲ್ಲಿ ಈ ಬಾರಿ ಕರಿ ಹರಿದು ಪ್ರಥಮ ಸ್ಥಾನ ಬಂದ ಬಿಳಿ ಎತ್ತು. ಸಂಪ್ರದಾಯದಂತೆ ಈ ವರ್ಷ ಬಿಳಿಜೋಳ ಫಸಲು ಉತ್ತಮವಾಗುತ್ತದೆ ಎಂಬ ನಂಬಿಕೆ ಇದೆ.

Exit mobile version