Site icon PowerTV

ನಟ ಸಿದ್ದಾಂತ್ ಡ್ರಗ್ಸ್ ಸೇವಿಸಿರೋದು ವೈದ್ಯಕೀಯ ಪರೀಕ್ಷೆಯಲ್ಲಿ ಧೃಡ

ಬೆಂಗಳೂರು: ದಿ ಪಾರ್ಕ್ ಹೋಟೆಲ್ ಮೇಲೆ ಪೊಲೀಸರ ದಾಳಿ ಪ್ರಕರಣದಲ್ಲಿ ಬಾಲಿವುಡ್ ನಟ ಸಿದ್ದಾಂತ್ ಡ್ರಗ್ಸ್ ಸೇವಿಸಿರೋದು ವೈದ್ಯಕೀಯ ಪರೀಕ್ಷೆಯಲ್ಲಿ ಧೃಡಪಟ್ಟಿದೆ.

ನಗರದ ದಿ ಪಾರ್ಕ್ ಹೋಟೆಲ್ ಮೇಲೆ ಪೊಲೀಸರ ದಾಳಿ ಮಾಡಿದ್ದು, ಕೊಕೇನ್ ಮಾದಕ ವಸ್ತುವನ್ನ ಸೇವಿಸಿರೋದು ವೈದ್ಯಕೀಯ ಪರೀಕ್ಷೆಯಲ್ಲಿ ಧೃಡಪಟ್ಟಿದೆ. ಇದೀಗ ಸಿದ್ದಾಂತ್ ಸೇರಿದಂತೆ ಹಲವು ವ್ಯಕ್ತಿಗಳ ಮೊಬೈಲನ್ನ ವಶಕ್ಕೆ ಪಡೆದಿದ್ದಾರೆ .

ಹಲಸೂರು ದಿ ಪಾರ್ಕ್ ಹೋಟೆಲ್ ನ ಎಂಟ್ರಿ ಲೆಡ್ಜರ್ ಬುಕ್ ಪಡೆದಿರುವ ಪೊಲೀಸರು. ದಾಳಿ ದಿನ 15 ಪೊಲೀಸರು ಹೋಟೆಲ್ ಒಳಕ್ಕೆ ಹೋಗಿದ್ದರು. ಈ ಕಾರಣಕ್ಕಾಗಿ ಕೇವಲ 50 ರಷ್ಟು ಮಂದಿಯನ್ನ ಮಾತ್ರ ಪೊಲೀಸರು ಸೆಕ್ಯುರ್ ಮಾಡಲು ಸಾಧ್ಯವಾಗಿತ್ತು. ಆದ್ರೆ, ಆ ದಿನದ ಡ್ರಗ್ಸ್ ಪಾರ್ಟಿಗೆ 321 ಮಂದಿ ಬಂದಿದ್ದರು. ಅದರಲ್ಲಿ ಇಂಟರ್ನ್ಯಾಷನಲ್ ಮಾಡೆಲ್ಸ್ ಗಳೇ 32 ಮಂದಿ ಇದ್ದರು.

ಅದಲ್ಲದೇ, ಕೇರಳ ಮೂಲದ ಹತ್ತಾರು ಮಂದಿ ಉದ್ಯಮಿಗಳು ಈ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಆ ಬ್ಯೂಟಿ ಮಾಡೆಲ್ ಗಳನ್ನ ಕೂಡ ಆ ಕೇರಳದ ಉದ್ಯಮಿಗಳೇ ಪಾರ್ಟಿಗೆ ಕಳುಹಿಸುತ್ತಿದ್ದರು. ಮಾಂಸ ದಂಧೆಯ ಜೊತೆಗೆ ದೊಡ್ಡ ದೊಡ್ಡ ಉದ್ಯಮಿದಾರರನ್ನ ಕ್ಯಾಚಾಕೋ ಉದ್ದೇಶದಿಂದಲೇ ಕೇರಳದ ಉದ್ಯಮಿಗಳು ಮಾಡೆಲ್ಸ್ ಗಳನ್ನ ಛೂ ಬಿಟ್ಟಿದ್ದರು. ಡ್ರಗ್ಸ್ ನಶೆ ಏರಿಸಿಕೊಂಡ ಉದ್ಯಮಿಗಳು ಈಜಿಯಾಗಿ ಕೇರಳದ ಉದ್ಯಮಿಗಳ ಗೆಳೆತನ ಬೆಳೆಸಿದ್ದರು, ಹಾಗೆನೇ ಇದೀಗ ಸಿದ್ದಾಂತ್ ಸೇರಿ ಹಲವರ ಮೊಬೈಲ್​​ಗಳನ್ನ ವಶಕ್ಕೆ ಪಡೆಯಲಾಗಿದೆ. ಡ್ರಗ್ಸ್ ಪೆಡ್ಲರ್ ಗಳ ಕಾಂಟ್ಯಾಕ್ಟನ್ನ ಕೂಡ ಪೊಲೀಸರು ಶೋಧಿಸಿದ್ದಾರೆ.

Exit mobile version