Site icon PowerTV

ದೇಶದ ಷೇರು, ಕರೆನ್ಸಿ ಮಾರುಕಟ್ಟೆಗಳು ತತ್ತರ..!

ಮಂಬೈ : ವಿಶ್ವದ ಬಹುತೇಕ ಷೇರುಸೂಚ್ಯಂಕ ಭಾರೀ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ಭಾರೀ ಶಾಕ್‌ ನೀಡಿವೆ. ಬಹುತೇಕ ದೇಶಗಳಲ್ಲಿ ಹಣದುಬ್ಬರ ಏರಿಕೆ ಸಮಸ್ಯೆ, ಡಾಲರ್‌ಗೆ ಬೇಡಿಕೆ ಹೆಚ್ಚಿದ್ದು, ಚೀನಾದಲ್ಲಿ ಮತ್ತೆ ಕೋವಿಡ್‌ ಸಂಖ್ಯೆಯಲ್ಲಿನ ಏರಿಕೆಗಳು ಷೇರು ಸೂಚ್ಯಂಕದ ಕುಸಿತಕ್ಕೆ ಕಾರಣವಾಗಿದೆ.

ವಿಶ್ವದ ಬಹುತೇಕ ಷೇರುಸೂಚ್ಯಂಕ ಭಾರೀ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ಭಾರೀ ಶಾಕ್‌ ನೀಡಿವೆ. ಬಹುತೇಕ ದೇಶಗಳಲ್ಲಿ ಹಣದುಬ್ಬರ ಏರಿಕೆ ಸಮಸ್ಯೆ, ಡಾಲರ್‌ಗೆ ಬೇಡಿಕೆ ಹೆಚ್ಚಿದ್ದು, ಚೀನಾದಲ್ಲಿ ಮತ್ತೆ ಕೋವಿಡ್‌ ಸಂಖ್ಯೆಯಲ್ಲಿನ ಏರಿಕೆಗಳು ಷೇರು ಸೂಚ್ಯಂಕದ ಕುಸಿತಕ್ಕೆ ಕಾರಣವಾಗಿದೆ.

ಅಮೆರಿಕದಲ್ಲಿ ಹಣದುಬ್ಬರ 40 ವರ್ಷಗಳ ಗರಿಷ್ಠಕ್ಕೆ ತಲುಪಿರುವುದು ಹಾಗೂ ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರ ಏರಿಕೆ ಮಾಡಿದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲ- ಕಲ್ಲೋಲವಾಗಿದೆ. ವಿಶ್ವಾದ್ಯಂತ ಷೇರು, ಕರೆನ್ಸಿ ಪೇಟೆಗಳಲ್ಲಿ ತಲ್ಲಣ ಉಂಟಾಗಿದೆ..ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ನಿನ್ನೆ 1456 ಅಂಕ ಕುಸಿತ ಕಂಡಿದ್ದು, ಇದರಿಂದ ಹೂಡಿಕೆದಾರರಿಗೆ ಒಂದೇ ದಿನ 6.64 ಲಕ್ಷ ಕೋಟಿ ರು. ನಷ್ಟವಾಗಿದೆ.

Exit mobile version