Site icon PowerTV

ಸಿಲಿಕಾನ್ ಸಿಟಿ ಜನರೇ ನೀವು ಮನೆ ಬಿಡೋದಕ್ಕೂ ಮುನ್ನಾ ಎಚ್ಚರ

ಬೆಂಗಳೂರು: ಇಸ್ಕಾನ್ ದೇವಾಲಯದ ಉದ್ಘಾಟನೆಗೆ ರಾಷ್ಟ್ರಪತಿ ಆಗಮಿಸುವ ಹಿನ್ನಲೆಯಲ್ಲಿ ನಗರದಲ್ಲಿ ಹಲವು ಕಡೆ ಟ್ರಾಫಿಕ್ ಜಾಮ್ ಆಗಲಿದೆ.

ನಿನ್ನೆ ತಾನೆ ಕಾಂಗ್ರೆಸ್ ಪ್ರೊಟೆಸ್ಟ್ ನಿಂದ ಬೇಸತ್ತಿದ್ದ ಜನತೆ. ಸದ್ಯ ಇಂದು ಕೂಡಾ ನಗರದಲ್ಲಿ ಹಲವು ಕಡೆ ಟ್ರಾಫಿಕ್ ಜಾಮ್ ಮುಂದುವರೆಯಲಿದೆ. ಕನಕ ಪುರ ರಸ್ತೆಯ ಅಂಗಡಿ ಮುಗ್ಗಟ್ಟುಗಳು ಬೆಳಿಗೆ 10 ರಿಂದ ಮದ್ಯಾನ 1:30 ರ ವರೆಗೂ ಅಂಗಡಿಗಳು ಮುಚ್ಚುವಂತೆ ಪೊಲೀಸರಿಂದ ಎಚ್ಚರಿಕೆಯನ್ನು ನೀಡಿದ್ದಾರೆ.

10:15 ರಿಂದ 11 ಗಂಟೆ ವರೆಗೂ ರಾಷ್ಟ್ರಪತಿ ಗಳ ಸಂಚಾರಕ್ಕೆ ರೂಟ್ ಮ್ಯಾಪ್ ಪಿಕ್ಸ್ ಮಾಡಲಾಗಿದ್ದು, ರಾಜ ಭವನದಿಂದ ವಿಠ್ಠಲ್ ಮಲ್ಯ ರೋಡ್, RRMR ರೋಡ್,NR ಸರ್ಕಲ್, ದೇವಾಂಗ ರಸ್ತೆ, ಲಾಲ್ ಬಾಗ್ ರಸ್ತೆ, ಕ್ರುಂಬಿಗಲ್ ರೋಡ್, ಸೌತ್ ಎಂಡ್ ರಸ್ತೆ, ಬನಶಂಕರಿ, ಸಾರಕ್ಕಿ,ಕೋಣನ ಕುಂಟೆ ಕ್ರಾಸ್, ದೊಡ್ಡಕಲ್ಲ ಸಂದ್ರ ಕ್ಕೆ ರಸ್ತೆ ಮೂಲಕ ಸಂಚಾರ ಮಾಡಲಿರುವ ರಾಷ್ರಪತಿಗಳು ನಂತರ ದೇವಾಲಯ ಉದ್ಘಾಟನೆ ಕಾರ್ಯಕ್ರಮ ಮುಗಿದ ಬಳಿಕ 11:45 ರಿಂದ 12:45 ರ ವರೆಗೂ ಕನಕಪುರ ರಸ್ತೆ ಮೂಲಕ ಓಲ್ಡ್ ಏರ್ ಪೋಟ್೯ ತಲುಪಲಿರುವ ರಾಷ್ರಪತಿಗಳು ಕನಕಪುರ ರಸ್ತೆ, ಮೂಲಕ ಸೌತ್ ಎಂಡ್ ಸರ್ಕಲ್, ಜೆಸಿ ರಸ್ತೆ, ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಕಸ್ತೂರಿ ಬಾ ರಸ್ತೆ, ಅನಿಲ್ ಕುಂಬ್ಲೆ ಸರ್ಕಲ್, ಬ್ರಿಗೇಡ್ ರೋಡ್ ಮೂಲಕ ಓಲ್ಡ್ ಏರ್ಪೋರ್ಟ್ ಗೆ ರಾಷ್ರಪತಿಗಳು ತಲುಪಲಿದ್ದಾರೆ.

Exit mobile version