Site icon PowerTV

ಶಾಸಕರಿಂದ ದಬ್ಬಾಳಿಕೆ ಆರೋಪ: ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಹಾವೇರಿ : ಶಾಸಕರ ಕುಟುಂಬದಿಂದ ದಬ್ಬಾಳಿಕೆ ಆರೋಪ ಹಿನ್ನಲೆ ರೈತ ಕುಟುಂಬದ ನಾಲ್ವರು ಸದ್ಯಸರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ನಡೆದಿದೆ.

ಪಾಂಡಪ್ಪ ಲಮಾಣಿ ( 70 ), ಗುರುಚಪ್ಪ ಲಮಾಣಿ  ( 72 ), ಗಂಗವ್ವ ಕಬ್ಬೂರು ( 65 ) ಮತ್ತು ಹನುಮಂತಪ್ಪ ಬಡಿಗೇರ ( 41 ) ಜಮೀನಿನಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ನಾಲ್ವರು ದುರ್ದೈವಿಗಳು. ತಕ್ಷಣ ಸ್ಥಳೀಯರು ಆಗಮಿಸಿ ಅಸ್ವಸ್ಥರಾಗಿದ್ದ ಅವರನ್ನು ಬ್ಯಾಡಗಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇನ್ನು ಈ ರೈತ ಕುಟುಂಬಕ್ಕೆ ದಬ್ಬಾಳಿಕೆ ಮಾಡಿದ್ದು, ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೇಕಾರ ಕುಟುಂಬವು. ಅಕ್ರಮ ಸಕ್ರಮ ಜಮೀನು ಸಾಗುವಳಿ ಮಾಡಿಕೊಂಡಿರೋ 29 ಕುಟುಂಬಗಳು. ಎಲ್ಲರಿಗೂ ತಲಾ ಹದಿನೈದು ಗುಂಟೆ ಜಮೀನು ಬಿಟ್ಟುಕೊಡುವಂತೆ ಹೇಳುತ್ತಿರೋ ಶಾಸಕ ಓಲೇಕಾರ ಮತ್ತು ಅವರ ಮಕ್ಕಳು. ಜಮೀನು ಬಿಟ್ಟುಕೊಡದಿದ್ದಕ್ಕೆ ಗ್ರಾಮದಲ್ಲಿನ ಜನರು ಈ 29 ಜಮೀನಿಗೆ ಕೃಷಿಗೆ ಸಹಕಾರ ಕೊಡದಂತೆ ಹೇಳಿದ್ದಾರೆ ಎಂದು ಆತ್ಮಹತ್ಯೆ ಯತ್ನಿಸಿರುವ ಕುಟುಂಬ ಆರೋಪಿಸಿದ್ದಾರೆ.

ಆದರೆ, ಈ ವಿಚಾರವನ್ನು ಶಾಸಕ ಅಲ್ಲೆಗೆಳೆದಿದ್ದಾರೆ.

ಸದ್ಯ ಈ ಪ್ರಕರಣವು ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version