Site icon PowerTV

ಅಡ್ಡ ಮತದಾನ ಹಾಕೋದಿಲ್ಲ ಎಂದು ಪಟ್ಟು ಹಿಡಿದ JDS​ ಶಾಸಕರು

ಬೆಂಗಳೂರು: ಇಂದು ರಾಜ್ಯ ಸಭಾ ಚುನಾವಣೆಯಾಗಿದ್ದು, ಯಾವುದೇ ಕಾರಣಕ್ಕೂ ಅಡ್ಡ ಮತದಾನ ಹಾಕೋದಿಲ್ಲ ಎಂದು ಜೆಡಿಎಸ್​ ಶಾಸಕರು ಪಟ್ಟು ಹಿಡಿದಿದ್ದಾರೆ.

ಯಶವಂತಪುರದ ಖಾಸಗಿ ಹೋಟೆಲ್ ನಲ್ಲಿ ಇರುವ ಶಾಸಕರು. 9 ಗಂಟೆಗೆ ಎಲ್ಲರು ಬಸ್ ಮೂಲಕ ವಿಧಾನಸೌಧ ತಲುಪಲಿದ್ದಾರೆ. ನಿನ್ನೆ ರಾತ್ರಿ‌ ನಡೆದ ಜೆಡಿಎಲ್​ಪಿ ಸಭೆಯಲ್ಲಿ ಒಮ್ಮತದ ನಿರ್ಧಾರವನ್ನು ಮಾಡಿದ್ದಾರೆ. ಎಲ್ಲರೂ ತಮ್ಮ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದಿರುವ ಶಾಸಕರು. ಅಸಮಧಾನಿತ ಶಾಸಕರ ಮನವೊಲಿಕೆ ಸಕ್ಸಸ್ ಮಾಡಿದ್ದಾರೆ.

ಅದಲ್ಲದೇ, ಅಸಮಧಾನಿತ ಶಾಸಕರ ಬಳಿ ಮಾತಾಡಿರುವ ಹೆಚ್​ಡಿಕೆ ಎಲ್ಲರೂ ಇಂದು ಜೆಡಿಎಸ್ ಅಭ್ಯರ್ಥಿ ಪರ ಮತ ಹಾಕುತ್ತೇವೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಅಡ್ಡ ಮತದಾನ ಹಾಕೋದಿಲ್ಲ ಎಂದಿರುವ ಶಾಸಕರು. ದಳಪತಿಗಳಿಗೆ ಕೈ ಕೊಟ್ಟ ಜೆಡಿಎಸ್ ಶಾಸಕರ ಜೊತೆಗೂ ಸಂದಾನ ಮಾಡಲಾಗಿದ್ದು, JDLP ಸಭೆಗೆ ಅಸಮಾಧಾನಿತ ಶಾಸಕರು ಗೈರಾಗಿದ್ದಾರೆ. ಜಿಟಿ ದೇವೇಗೌಡ, ಶಿವಲಿಂಗೇಗೌಡ, ಶ್ರೀನಿವಾಸ ಗೌಡ, ಗುಬ್ಬಿ ಶ್ರೀನಿವಾಸ್, ಗೌರಿಶಂಕರ್, ಎಟಿ ರಾಮಸ್ವಾಮಿ ಜೊತೆಗೂ ಹೆಚ್​ಡಿಕೆ ಮಾತುಕತೆಯನ್ನು ಮಾಡಿದ್ದಾರೆ.

Exit mobile version