Site icon PowerTV

ಕರ್ನಾಟಕದಲ್ಲಿ ಹೊಸ ಇತಿಹಾಸ ಶುರುವಾಗುತ್ತೆ : ಸಿಎಂ ಇಬ್ರಾಹಿಂ

ಬೆಂಗಳೂರು: ಕರ್ನಾಟಕದಲ್ಲಿ ಹೊಸ ಇತಿಹಾಸ ಶುರುವಾಗುತ್ತೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿನಾ ಸೋಲಿಸಲೇಬೇಕು ಅಂತಾ ಇದ್ರೇ ಫಸ್ಟ್ ವೋಟು ನಿಮ್ಗೆ ಹಾಕೊಂಡು ಸೆಕೆಂಡ್ ವೋಟು ನಮ್ಗೆ ಕೊಡಿ. ಅದನ್ನು ಕೊಡೋಕೆ ತಯಾರಿಲ್ಲ. ಸೆಕೆಂಡ್ ವೋಟು ಕೊಡೋಕೆ ನಾವು ತಯಾರಿದ್ದೇವೆ ಅವ್ರು ರೆಡಿ ಇಲ್ಲ ಎಂದರು.

ಅದಲ್ಲದೇ, ಬೇರೆಯವರು ತಾಳಿ ಕಟ್ಟಿರೋರಿಗೆ ಲವ್ ಲೆಟರ್ ಬರೆದ್ರೇ ಆಗುತ್ತಾ‌.! ಪಕ್ಕದ ಮನೆಯ ಧರ್ಮ ಪತ್ನಿಗೆ ಪತ್ರ ಬರೆಯುತ್ತೀರಾ..! ಇದು ಅಪರಾಧ ಅಲ್ವಾ? ಇದು ನೈತಿಕತೆಯಾ ! ಸಿದ್ದರಾಮಯ್ಯ ವಿರುದ್ಧ ಸಿಎಂ ಇಬ್ರಾಹಿಂ ಸಿಡಿದೆದ್ದಿದ್ದಾರೆ. ಹಿಂದಿನ ಚರಿತ್ರೆ ಇದೆ ನಂಗೆ ಗೊತ್ತು‌.! ನಮ್ಮನ್ನು ಪೀಡಿಸಬೇಡಿ ನಮ್ಮ ಪಾಡಿಗೆ ನಮ್ಮನ್ನು ಬಿಡಿ. ನಾವು ಬಿಚ್ಚೋಕೆ ಶುರುಮಾಡಿದ್ರೇ ನಿಮ್ಗೆ ಓಡಾಡೋಕೆ ಕಷ್ಟ ಆಗುತ್ತೆ ಎಂದು ಹೇಳಿದರು.

Exit mobile version