Site icon PowerTV

ಆತ್ಮಸಾಕ್ಷಿಯ ಮತ ಬಾಣದ ರೀತಿಯಲ್ಲಿ ಬೀಳಬಹುದು : ಹೆಚ್​ಡಿಕೆ

ಬೆಂಗಳೂರು : ರಾಜ್ಯ ಸಭಾ ಚುನಾವಣೆ ಆರಂಭಗೊಂಡಿದ್ದು, ನಾವು ಯಾರಿಗೂ ವಯುಕ್ತಿಕವಾಗಿ ಮಾತನಾಡಿಲ್ಲ ಎಂದು ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಎರಡನೇ ಪ್ರಾಶಸ್ತ್ಯ ಮತವೂ ಬೀಳದಂತೆ ನೋಡಿಕೊಳ್ಳಲು ಸಜ್ಜಾಗಿದ್ದಾರೆ. ಹತ್ತನೇ ತಾರೀಖು ನಂತರ ನಿಜವಾಗಿ ಬಿಜೆಪಿ ಟೀಂ ಯಾರು ಅಂತ ಗೊತ್ತಾಗುತ್ತೆ. ಸಿಟಿ ರವಿ ಅಪ್ಪಿತಪ್ಪಿ ಸಿದ್ದು ಕೊಠಡಿಗೆ ಹೋಗಿದ್ದಾರೆ ಅಂತ ಹೇಳ್ತಾರೆ. ಆದರೆ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ ಧನ್ಯವಾದ ಹೇಳಕ್ಕೆ ಹೋಗಿರ್ತಾರೆ. ಅಪ್ಪಿತಪ್ಪಿ ಹೋಗಿದ್ದಾರೆ ಅಂದ್ರೆ ಯಾರಾದರೂ ನಂಬತಾರಾ ಎಂದರು.

ಅದಲ್ಲದೇ, ಕಾಂಗ್ರೆಸ್ ನಾಯಕರು ಶ್ರೀನಿವಾಸ್ ಗೌಡರನ್ನು ಬ್ರೈನ್ ವಾಶ್ ಮಾಡಿದ್ದಾರೆ. ಈ ಮೂಲಕ ರಮೇಶ್ ಕುಮಾರ್, ಸಿದ್ದರಾಮಯ್ಯ ಸೇರಿ ಬಿಜೆಪಿನ ಗೆಲ್ಸಿದ್ದಾರೆ. ಆದರೂ ನಾವು ಭರಸವೆ ಕಳೆದುಕೊಂಡಿಲ್ಲ. ಆತ್ಮಸಾಕ್ಷಿಯ ಮತ ನಮಗೂ ಬಾಣದ ರೀತಿಯಲ್ಲಿ ಬೀಳಬಹುದು ಎಂಬ ಭರಸವೆ ಇದೆ ಎಂದು ಹೇಳಿದರು.

Exit mobile version