Site icon PowerTV

ಚುನಾವಣಾ ಟೆನ್ಷನ್​ನಲ್ಲಿ ಸಿದ್ದರಾಮಯ್ಯ ಕಚೇರಿಗೆ ಹೋಗಿ ಬಂದ ಸಿಟಿ ರವಿ

ಬೆಂಗಳೂರು: ಚುನಾವಣಾ ಟೆನ್ಷನ್​​ನಲ್ಲಿ ಆಕಸ್ಮಿಕವಾಗಿ ವಿಧಾಸೌಧದ ಕಾಂಗ್ರೇಸ್ ಕಚೇರಿ ಸಿಟಿ ರವಿ ಪ್ರವೇಶಿಸಿದ್ದಾರೆ.

ಚುನಾವಣಾ ಟೆನ್ಷನ್ ನಲ್ಲಿ ಸಿಟಿ ರವಿ ಯಡವಟ್ಟು ಮಾಡಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಗೆ ಬಂದಿದ್ದಾರೆ. ಆಕಸ್ಮಿಕವಾಗಿ ವಿಧಾಸೌಧದ ಕಾಂಗ್ರೇಸ್ ಕಚೇರಿ ಪ್ರವೇಶಿಸಿದ ಅವರು, ಡಿಕೆ ಶಿವಕುಮಾರ್ ನೋಡುತ್ತಿದ್ದಂತೆ ತಬ್ಬಿಬ್ಬಾಗಿದ್ದಾರೆ.

ಅದಲ್ಲದೇ, ಡಿಕೆ ಶಿವಕುಮಾರ್ ನೋಡುತ್ತಿದ್ದಂತೆ ಅಯ್ಯೋ ಎಂದ ಹೇಳಿ ಹೊರಟ ಅವರು, ಈ ಹಿಂದೆ ಅದೇ ಕೊಠಡಿಗೆ ಹೋಗಿ ಅಭ್ಯಾಸ ಅದಕ್ಕೆ ಹೋಗಿದ್ದೆ. ಅಮೇಲೆ ತಪ್ಪಿ ಬಂದೆ ಅಂತ ವಾಪಸ್ ಬಂದೆ. ಎರಡು ಅಭ್ಯರ್ಥಿಗಳು ಮೆರಿಟ್ ಮೇಲೆ ಇನ್ನು ಎರಡು ಅಭ್ಯರ್ಥಿಗಳು ಅದೃಷ್ಟದ ಮೇಲೆ, ಆತ್ಮಸಾಕ್ಷಿ ಮತ ಯಾರಿಗೆ ಬೀಳುತ್ತೆ ಕಾದು ನೋಡಿ ಇಷ್ಟು ದಿನ ಕುತೂಹಲದಿಂದ ಕಾದಿದ್ದೀರಿ ಎಂದರು.

Exit mobile version