Site icon PowerTV

ಶಾಲಿನಿಗೆ ಹೆತ್ತವರಿಂದಲೇ ಸಾವು ಬರುತ್ತೆ ಎಂದು ಮೊದಲೇ ಗೊತ್ತಿತ್ತು

ಮೈಸೂರು: ಸಾಯುವ ಮುನ್ನ ಮಗಳಿಗೆ ಸಾವಿನ ಸುಳಿವು ಗೊತ್ತಾಗಿದ್ದು, ಸಾಯುವ ಮುನ್ನ ಶಾಲಿನಿ ಯುವಕನ ಜೊತೆ ಮಾತನಾಡಿರುವ ಆಡಿಯೋ ಈಗ ವೈರಲ್​ ಆಗಿದೆ.

ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದ್ದ ಮರ್ಯಾದ ಹತ್ಯೆಯಲ್ಲಿ ಶಾಲಿನಿ 17 ಕೊಲೆಯಾಗಿದ್ದಳು. ತಂದೆ ಸುರೇಶ್ ತಾಯಿ ಬೇಬಿಯಿಂದ ಮಗಳ ಕೊಲೆ ಮಾಡಿದ್ದು, ಅನ್ಯಜಾತಿಯ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳನ್ನೇ ಪೋಷಕರು ಕೊಲೆ ಮಾಡಿದ್ದಾರೆ. ಶಾಲಿನಿಗೆ ಹೆತ್ತವರಿಂದಲೇ ಸಾವು ಬರುತ್ತೆ ಎಂದು ಮೊದಲೇ ಗೊತ್ತಿತ್ತು. ಸಾಯುವ ಮುನ್ನ ಶಾಲಿನಿ ಯುವಕನ ಜೊತೆ ಮಾತನಾಡಿರುವ ಆಡಿಯೋ ವೈರಲ್​ ಆಗಿದೆ.

ನಾನೇನಾದ್ರು ಸತ್ತರೆ ಅದಕ್ಕೆ ನಮ್ಮ ಅಪ್ಪ ಅಮ್ಮನೇ ಕಾರಣ. ನನ್ನನ್ನು ಅಪಹರಣ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ. ಬಾಲ ಮಂದಿರದಿಂದ ನೀನು ನಿನ್ನಷ್ಟದ ಹಾಗೇ ಇರು ಎಂದು ಕರೆದುಕೊಂಡು ಬಂದರು. ಪಾಂಡವಪುರದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ನಾನು ಮಾತನಾಡಿರುವುದನ್ನ ರೆಕಾರ್ಡ್ ಮಾಡಿಕೋ. ನಾನು ಸತ್ತರೆ ಅದನ್ನು ನಿನ್ನ ಮೇಲೆ ಹಾಕಲು ಪ್ಲ್ಯಾನ್ ಮಾಡಿದ್ದಾರೆ. ಈ ಆಡಿಯೋ ಪಿರಿಯಾಪಟ್ಟಣ ಪೊಲೀಸರಿಗೆ ಕೊಡು ಎಂದು ಪ್ರಿಯಕರ ಮಂಜುನಾಥ್​​ಗೆ ಹೇಳಿದ್ದಾಳೆ.

ಅದಲ್ಲದೇ, ಮೃತ ಶಾಲಿನಿ ಆಡಿಯೋದಲ್ಲಿ ಬಹಿರಂಗವಾಗಿದ್ದು, ಈ ವೇಳೆ ನಿನಗೆ ಏನೇ ಆದರೂ ನನಗೆ ಕಾಲ್ ಮಾಡು. ನೀನು ಬಾಲಮಂದಿರದಿಂದ ಏಕೆ ಬಂದೆ ? 18 ವರ್ಷ ಆಗುವವರೆಗೂ ಹುಷಾರಾಗಿರು ಎಂದು ಪೋನ್ ಮೂಲಕ ಶಾಲಿನಿಗೆ ಮಂಜುನಾಥ್ ಎಚ್ಚರಿಸಿದ್ದಾನೆ.

Exit mobile version