Site icon PowerTV

ಹೊಸೂರು ತನಕ ಮೆಟ್ರೋ ಮಾರ್ಗ ವಿಸ್ತರಣೆಗೆ ಸರ್ಕಾರ ಅನುಮೋದನೆ

ಬೆಂಗಳೂರು : ನಮ್ಮ ಮೆಟ್ರೋ ಹಂತ 2ರ ಅಡಿಯಲ್ಲಿ ನಿರ್ಮಿಸುತ್ತಿರುವ ರಾಷ್ಟ್ರೀಯ ವಿದ್ಯಾಲಯ ರಸ್ತೆ-ಬೊಮ್ಮಸಂದ್ರ ಮಾರ್ಗವನ್ನು ಹೊಸೂರಿಗೆ ವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ.

ಕೃಷ್ಣಗಿರಿ ಸಂಸದ ಡಾ.ಎ.ಚೆಲ್ಲಕುಮಾರ್ ಮೆಟ್ರೋ ಮಾರ್ಗಕ್ಕೆ ಕರ್ನಾಟಕ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಸರ್ಕಾರದ ಅನುಮೋದನೆ ದೊರೆತಿರುವುದು ಸಕಾರಾತ್ಮಕ ಬೆಳವಣಿಗೆ ಎಂದಿದ್ದಾರೆ.

20.5 ಕಿ.ಮೀ. ಉದ್ದದ ಮಾರ್ಗ; ಹೊಸೂರುವರೆಗಿನ ನಮ್ಮ ಮೆಟ್ರೋ ಮಾರ್ಗದ ಉದ್ದ 20.5 ಕಿ.ಮೀ. ಎಂದು ಅಂದಾಜಿಸಲಾಗಿದೆ. ಅದರಲ್ಲಿ 11.7 ಕಿಮೀ ಕರ್ನಾಟಕದ ಗಡಿಯೊಳಗೆ ಬರುತ್ತದೆ. ರಾಜ್ಯದ ಗಡಿಗಳನ್ನು ಮೀರಿದ ಯೋಜನೆಗಳ ಕುರಿತು ಇರುವ ‘ಮೆಟ್ರೋ ರೈಲು ನೀತಿ 2017’ರ ಮಾರ್ಗಸೂಚಿಗಳ ಪ್ರಕಾರ ತಮಿಳುನಾಡು ಅಧ್ಯಯನ ಕೈಗೊಳ್ಳುವಂತೆ BMRCL ಮನವಿ ಮಾಡಿದೆ.

Exit mobile version