Site icon PowerTV

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಜನರು ಲಂಗೋಟಿ ಬಿಚ್ಚಿ ಕಳಿಸುತ್ತಾರೆ: ಗೃಹಸಚಿವ

ಚಿತ್ರದುರ್ಗ:  ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸಗಳಿಲ್ಲ, ಮನಸೋ ಇಚ್ಛೆ ಮಾತಾಡುತ್ತಿದ್ದಾರೆ. ಈಗಾಗಲೇ ಇಡೀ ದೇಶದಲ್ಲಿ ಕಾಂಗ್ರೆಸ್​ಗೆ ಚಡ್ಡಿ ಬಿಚ್ಚಿ ಕಳುಹಿಸಿದ್ದಾರೆ. ಮುಂದೆ ಕರ್ನಾಟಕದ ಜನ ಲಂಗೋಟಿಯನ್ನು ಬಿಚ್ಚಿ‌ ಕಳುಹಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರೋಧ ಪಕ್ಷದ ಬಗ್ಗೆ ವ್ಯಂಗ್ಯವಾಡಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಇಷ್ಟು ದಿನ ಆಡಳಿತ ನಡೆಸಿದೆ. ಆದರೆ, ಅವರಿಗೆ ಹೊಣೆಗಾರಿಕೆ ಮರೆತು ಹೋಗಿದೆ. ಕೈ ನಾಯಕರು ಮನಸೋ ಇಚ್ಛೆ ಮಾತಾಡುತ್ತಿದ್ದಾರೆ ಹೀಗೆ ಮಾತಾಡುತ್ತಾ, ಓಡಾಡಿಕೊಂಡು ಇದ್ದರೆ, ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಲಂಗೋಟಿಯನ್ನು ಬಿಚ್ಚಿ‌ ಕಳಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

Exit mobile version