Site icon PowerTV

ಟ್ರಾಫಿಕ್ ಪೊಲೀಸರಿಗೆ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಆವಾಜ್

ಬೆಂಗಳೂರು : ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕರೂ ಆಗಿರುವ ಅರವಿಂದ ಲಿಂಬಾವಳಿ ಅವರ ಪುತ್ರಿ ಟ್ರಾಫಿಕ್ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ಬಳಿ ನಡೆದಿದೆ.

ಟ್ರಾಫಿಕ್ ಪೊಲೀಸರು ತಪಾಸಣೆ ವೇಳೆ ಕಾರು ತಡೆದ ಹಿನ್ನೆಲೆಯಲ್ಲಿ ಸಿಟ್ಟಾದ ಲಿಂಬಾವಳಿ ಪುತ್ರಿ, ಕಾರಿನಿಂದ ಇಳಿದ ಕೂಡಲೇ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಾನು MLA ಅರವಿಂದ ಲಿಂಬಾವಳಿ ಮಗಳು ಗೊತ್ತಾ? ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ.

ರ‍್ಯಾಷ್ ಡ್ರೈವಿಂಗ್ ಮಾಡಿಕೊಂಡು ಬಂದು, ಪೊಲೀಸರಿಗೂ ಕೇರ್ ಮಾಡದೇ ಪೊಲೀಸರ ಮೇಲೆಯೇ ಕಾರು ಹತ್ತಿಸುವಂತೆ ಕಾರು ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆನ್ನತ್ತಿದ ಪೊಲೀಸರನ್ನು ನೋಡಿ ಕ್ಯಾಪಿಟಲ್ ಹೋಟೆಲ್ ಒಳಗೆ ಕಾರು ಚಲಾಯಿಸಿದ್ದಾರೆ. ಕಾರು ವಾಪಸ್ ಬರುತ್ತಿದ್ದ ವೇಳೆ ಹೋಟೆಲ್ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸರ ಮೇಲೆಯೇ ದರ್ಪ ತೋರಿ `ನಾನು ಅರವಿಂದ ಲಿಂಬಾವಳಿ ಮಗಳು’ ಎಂದು ಆವಾಜ್ ಹಾಕಿದ್ದಾರೆ

ಅಷ್ಟೆಅಲ್ಲದೆ ಇದು MLA ಗಾಡಿ, ನಾನು ಅರವಿಂದ ಲಿಂಬಾವಳಿ ಅವರ ಪುತ್ರಿ ಎಂದು ವಾಗ್ವಾದ ನಡೆಸಿದ್ದಾರೆ. ಮಾಜಿ ಸಚಿವರ ಪುತ್ರಿ ಎಂದು ತಿಳಿಯುತ್ತಿದ್ದಂತೆ ಅವರನ್ನು ಬಿಟ್ಟುಕಳುಹಿಸಿದ್ದಾರೆ. ಈ ಸಂಬಂಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

Exit mobile version